ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟುವುದರ ಮೂಲಕ ಸಮಾಜಮುಖಿ ಚಿಂತನೆ ಹಾಗೂ ಶೈಕ್ಷಣಿಕ ಕ್ರಾಂತಿಯ ಮಹಾತ್ವಾಕಾಂಕ್ಷೆಯೊಂದಿಗೆ ಆರಂಭಿಸಲಾದ “ಕ್ರಿಯೇಟಿವ್ ನಿನಾದ”ದ ನಾಲ್ಕನೇ ಸಂಚಿಕೆ ಹಾಗೂ ವಿಶೇಷ ಪುರವಣಿಯನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಕ್ರಿಯಾತ್ಮಕ ಮತ್ತು ಸೃಜನ ಶೀಲತೆಯನ್ನು ಒಂದುಗೂಡಿಸಿ ಹೊಸ ವಿಚಾರವಂತಿಕೆಗಳನ್ನು ಮೂಡಿಸುವ ಸಂಚಿಕೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಹಾರೈಸಿದರು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಒಂದೇ ಸೂರಿನಡಿ ಯಶಸ್ಸಿನ ಆಯ್ಕೆಗೆ ಕ್ರಿಯೇಟಿವ್ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥಾಪಕರಾದ ಅಮೃತ್ ರೈ ಮಾತನಾಡಿ ಕ್ರಿಯಾಶೀಲ ವ್ಯಕ್ತಿತ್ವಗಳಿಗೆ ವಿಶೇಷ ಅಭಿವ್ಯಕ್ತಿ ನೀಡುವ ಮೂಲಕ ನಿನಾದ ಮುನ್ನಡಿಯಾಗಿದೆ. ಹೊಸ ಯೋಚನೆ, ಯೋಜನೆಗಳೊಂದಿಗೆ ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದರು ಈ ಸಂದರ್ಭದಲ್ಲಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ಆದರ್ಶ ಎಂ. ಕೆ, ವಿಮಲ್ ರಾಜ್ ಹಾಗೂ “ನಿನಾದ” ಸಂಪಾದಕರಾದ ರಾಘವೇಂದ್ರ ರಾವ್, ಉಪನ್ಯಾಸಕರಾದ ವಿನಾಯಕ ಜೋಗ್, ರಾಜೇಶ್ ಶೆಟ್ಟಿ, ರಾಮಕೃಷ್ಣ ಹೆಗಡೆ, ಪಿ ಆರ್ ಒ ಲಿಶನ್ ಗೌಡ ಮತ್ತು ನರೇಶ್ ಕುಮಾರ್ ಉಪಸ್ಥಿತರಿದ್ದರು.