+91 90198 44492, +91 96861 12198, +91 80737 56895

ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಉದ್ಭವ್ ಎಂ ಆರ್ IISc ಗೆ ಆಯ್ಕೆ

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿ ಉದ್ಭವ್‌ ಎಂ ಆರ್‌ ಬೆಂಗಳೂರಿನ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (IISc) ಗೆ ಆಯ್ಕೆಯಾಗಿದ್ದಾರೆ. ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಒಂದಾದ IISC ಗೆ ಪ್ರವೇಶ ದೊರಕಿಸಿಕೊಳ್ಳುವುದು ಅತ್ಯಂತ ಕಠಿಣವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಶಿಕ್ಷಣದ ಹಂಬಲವಿರುವ ಅಭ್ಯರ್ಥಿಗಳಿಗೆ ಆಕರ್ಷಕ ವೃತ್ತಿ ಅವಕಾಶಗಳಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿರುವ IISC ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲದಲ್ಲಿ ಒಂದಾಗಿದೆ.

ಉದ್ಭವ್‌ ಎಂ ಆರ್‌ JOINT ENTRANCE EXAMINATION (JEE) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ರಾಷ್ಟ್ರಕ್ಕೆ 152 ನೇ ಸ್ಥಾನವನ್ನು ಗಳಿಸಿದ್ದು, JEE MAINS CHANNEL ಮುಖಾಂತರ 4 ವರ್ಷದ ಬ್ಯಾಷುಲರ್‌ ಆಫ್‌ ಸೈನ್ಸ್‌ (ಸಂಶೋಧನೆ) ಕೋರ್ಸಿಗೆ ಆಯ್ಕೆಯಾಗಿರುತ್ತಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯ ಈ ಸಾಧನೆಗೆ ಹೆತ್ತವರು, ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

This site uses Akismet to reduce spam. Learn how your comment data is processed.

GDPR