Follow us:-
ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 2024-2025ನೇ ಸಾಲಿನ N.S.S ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ
  • By Lishan Gowda
  • April 26, 2025
  • No Comments

ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 2024-2025ನೇ ಸಾಲಿನ N.S.S ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ

ದಿನಾಂಕ 26/04/2025 ಶನಿವಾರ ದಂದು N.S.S ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.
ಸಭೆಯನ್ನುದ್ದೇಶಿಸಿ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ. ಬಿ.ಮಾತನಾಡುತ್ತ N.S.S ಜೀವನ ಪಾಠವನ್ನು ಕಲಿಸುತ್ತದೆ. ಈ ಅನುಭವ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದರು.
ಇನ್ನೋರ್ವ ಸಂಸ್ಥಾಪಕರಾದ ಅಶ್ವತ್.ಎಸ್.ಎಲ್. N.S.S . ನ ವಿಶೇಷ ಶಿಬಿರ ಗಳು ಹಾಗೂ ಇತರೆ ಸಮಾಜಮುಖಿ ಸೇವೆಗಳು ನಮ್ಮ ನ್ನು ಶ್ರೇಷ್ಠ ವ್ಯಕ್ತಿ ಗಳಾಗಿ ರೂಪಿಸಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥಾಪಕರಲ್ಲಿ ಓರ್ವರು ಹಾಗೂ ಪ್ರಾಂಶುಪಾಲರು ಆದ ವಿದ್ವಾ ನ್ ಗಣಪತಿ ಭಟ್ ಮಾತನಾಡುತ್ತ ಸೇವಾ ಮನೋಭಾವ ಶ್ರೇಷ್ಠ ವಾದುದ್ದು ,ಈ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಹಕಾರಿ ಎಂದರು .
ಕಾರ್ಯಕ್ರಮದಲ್ಲಿ N.S.S ಚಟುವಟಿಕೆಗಳಲ್ಲಿ ಸಾಧನೆ ಗೈದ ಸ್ವಯಂ ಸೇವಕರಿಗೆ ಫಲಕ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಸಂಯೋಜನಾಧಿಕಾರಿ ಉಮೇಶ್.ಉಪನ್ಯಾಸಕರಾದ ರಾಘವೇಂದ್ರ.B. ರಾವ್.ಚಂದ್ರಕಾಂತ್.ಹಾಗೂ ಬೋಧಕೇತರು ಹಾಗೂ N.S.S ಸ್ವಯಂ ಸೇವಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಧ್ಯ ಪಡ್ರೆ ಕಾರ್ಯಕ್ರಮ ನಿರೂಪಿಸಿ ಹಿತ ವಂದಿಸಿದರು

Leave a Reply

Your email address will not be published. Required fields are marked *