ಜೆ.ಇ.ಇ.(ಮೇನ್ಸ್)2025, ಹೆಚ್.ಕೆ.ಎಸ್.ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.
ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆ ಇ ಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪದವಿಪೂರ್ವ ಕಾಲೇಜಿನ 26 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆ.ಇ.ಇ. (ಅಡ್ವಾನ್ಸ್ಡ್) ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.7656463 ಪರ್ಸೆಂಟೈಲ್ ಮೂಲಕ AIR ( ಆಲ್ ಇಂಡಿಯಾ ರ್‍ಯಾಂಕ್) 733ನೇ ಕೆಟಗರಿ ರ್‍ಯಾಂಕ್, ಹೆಚ್.ಎ. ರಾಜೇಶ್ 99.1055485, ಹೇಮಂತ್ ಕುಮಾರ್ 98.5816187, ಗಣೇಶ್ ಜಿ 98.312243, ಸಂಗೀತಾ ಬಿ.ಎಂ 97.7450628, ಶ್ರೀನಿಧಿ .ಡಿ 96.7363067, ಪ್ರೇಕ್ಷಾ ಸಿ.ಜೆ 96.6773577. ಅಂಕಗಳನ್ನು ಗಳಿಸಿದ್ದಾರೆ.
ಹೆಚ್. ಎ .ರಾಜೇಶ್ ಎಂಬ ವಿದ್ಯಾರ್ಥಿ ಭೌತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಗಳಿಸುವ ಜೊತೆಗೆ ಸುಮಾರು 9 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೆಂಟೈಲಿಗಿಂತ ಅಧಿಕ ಅಂಕ ಗಳಿಸಿರುತ್ತಾರೆ. ಒಟ್ಟಾರೆ 90 ಪರ್ಸೆಂಟೈಲ್ ಗಿಂತ ಮೇಲ್ಪಟ್ಟು 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಲಯಗಳಾದ ಎನ್ ಐ ಟಿ, ಐ ಐ ಐ ಟಿ ಮೊದಲಾದ ಸಂಸ್ಥೆಗಳಲ್ಲಿ ಬಿ. ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ ಐ ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆಇಇ ಅಡ್ವಾನ್ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.
ಸಂಸ್ಥೆಯು ಪ್ರತಿವರ್ಷವೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀ ಹೆಚ್.ಎಸ್ ಪ್ರಶಾಂತ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆ ಇ ಇ (ಮೈನ್) ಪರೀಕ್ಷೆಯ ಸಂಯೋಜಕರಾದ ಆದಿತ್ಯ ವಟಿ ಕೆ ಅಭಿನಂದಿಸಿದ್ದಾರೆ.