Follow us:-
ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ  ಹೆಚ್.ಕೆ.ಎಸ್. ಕಾಲೇಜಿನ ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ
  • By CREATIVE ADMIN
  • May 24, 2025
  • No Comments

ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಹೆಚ್.ಕೆ.ಎಸ್. ಕಾಲೇಜಿನ ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

ಏಪ್ರಿಲ್ 16 ಮತ್ತು 17ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅದ್ಭುತ ಸಾಧನೆ ಗೈದಿದ್ದಾರೆ.

ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್, ನ್ಯಾಚುರೋಪತಿ, ಫಾರ್ಮಸಿ ಮತ್ತು ಪಶು ವೈದ್ಯಕೀಯ ಸೇರಿದಂತೆ ಹಲವು ಕೋರ್ಸ್ ಗಳಿಗೆ ಸೇರಲು ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗೆ ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ.

ವಿದ್ಯಾರ್ಥಿಯಾದ ಎಚ್ ಎ ರಾಜೇಶ್ ಅವರು ವಿವಿಧ ವಿಭಾಗದಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. (ನ್ಯಾಚುರೋಪತಿ ವಿಭಾಗದಲ್ಲಿ 35 ನೇ ರ‍್ಯಾಂಕ್‌, ಕೃಷಿ ವಿಭಾಗದಲ್ಲಿ 150 ನೇ ರ‍್ಯಾಂಕ್‌, ಪಶು ವೈದ್ಯಕೀಯ 52 ನೇ ರ‍್ಯಾಂಕ್‌, ನರ್ಸಿಂಗ್ 52 ನೇ ರ‍್ಯಾಂಕ್‌, ಬಿ ಫಾರ್ಮ ಡಿ ಫಾರ್ಮ 62 ನೇ ರ‍್ಯಾಂಕ್‌, ಇಂಜಿನಿಯರಿಂಗ್ 830 ನೇ ರ‍್ಯಾಂಕ್‌), ಉಳಿದಂತೆ ಚೇತನ್ ಗೌಡ ಎನ್ ಎಸ್ (ಇಂಜಿನಿಯರಿಂಗ್ 732 ನೇ ರ‍್ಯಾಂಕ್‌), ಗಣೇಶ್ ಜಿ (ನ್ಯಾಚುರೋಪತಿ 276ನೇ ರ‍್ಯಾಂಕ್‌, ಕೃಷಿ ವಿಭಾಗದಲ್ಲಿ 298ನೇ ರ‍್ಯಾಂಕ್‌, ಪಶು ವೈದ್ಯಕೀಯ 357ನೇ ರ‍್ಯಾಂಕ್‌, ನರ್ಸಿಂಗ್ 360ನೇ ರ‍್ಯಾಂಕ್‌, ಬಿ ಫಾರ್ಮಾ ಡಿ ಫಾರ್ಮ 630ನೇ ರ‍್ಯಾಂಕ್‌, ಇಂಜಿನಿಯರಿಂಗ್ 1577ನೇ ರ‍್ಯಾಂಕ್‌), ಹೇಮಂತ್ ಕುಮಾರ್ (ಕೃಷಿ ವಿಭಾಗದಲ್ಲಿ 326ನೇ ರ‍್ಯಾಂಕ್‌, ಪಶು ವೈದ್ಯಕೀಯ 361ನೇ ರ‍್ಯಾಂಕ್‌, ನರ್ಸಿಂಗ್ 364ನೇ ರ‍್ಯಾಂಕ್‌, ನ್ಯಾಚುರೋಪತಿ 420ನೇ ರ‍್ಯಾಂಕ್‌, ಬಿ ಫಾರ್ಮ ಡಿ ಫಾರ್ಮ 621ನೇ ರ‍್ಯಾಂಕ್‌), ಶ್ರೀನಿಧಿ ಡಿ (ಕೃಷಿ ವಿಭಾಗದಲ್ಲಿ 347ನೇ ರ‍್ಯಾಂಕ್‌, ನ್ಯಾಚುರೋಪತಿ 469ನೇ ರ‍್ಯಾಂಕ್‌, ಪಶು ವೈದ್ಯಕೀಯ 842ನೇ ರ‍್ಯಾಂಕ್‌, ನರ್ಸಿಂಗ್ 850ನೇ ರ‍್ಯಾಂಕ್‌, ಬಿ ಫಾರ್ಮ ಡಿ ಫಾರ್ಮ 1352ನೇ ರ‍್ಯಾಂಕ್‌, ಇಂಜಿನಿಯರಿಂಗ್ 1676ನೇ ರ‍್ಯಾಂಕ್‌), ಸಂಗೀತ ಬಿ ಎಂ (ಕೃಷಿ ವಿಭಾಗದಲ್ಲಿ 426ನೇ ರ‍್ಯಾಂಕ್‌, ನ್ಯಾಚುರೋಪತಿ 895ನೇ ರ‍್ಯಾಂಕ್‌, ಪಶು ವೈದ್ಯಕೀಯ 1308ನೇ ರ‍್ಯಾಂಕ್‌, ನರ್ಸಿಂಗ್ 1318ನೇ ರ‍್ಯಾಂಕ್‌, ಬಿ ಫಾರ್ಮ ಡಿ ಫಾರ್ಮ 1851ನೇ ರ‍್ಯಾಂಕ್‌, ಇಂಜಿನಿಯರಿಂಗ್ 1824ನೇ ರ‍್ಯಾಂಕ್‌ ಪಡೆದು ಹಲವು ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳೊಂದಿಗೆ ಉತ್ತೀರ್ಣರಾಗಿದ್ದು 500 ರೊಳಗೆ 19 ವಿದ್ಯಾರ್ಥಿಗಳು, 1000 ದೊಳಗೆ 30 ವಿದ್ಯಾರ್ಥಿಗಳು, 5000 ದೊಳಗೆ 117 ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳೊಂದಿಗೆ ಉತ್ತೀರ್ಣರಾಗಿದ್ದು ಕಾಲೇಜಿಗೆ ಹಾಗೂ ಹಾಸನ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಂಯೋಜಕರಾದ ಯೋಗೀಶ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *