ನೀಟ್ ಫಲಿತಾಂಶ ಪ್ರಕಟ: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್. ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 4 ರಂದು ನಡೆಸಿದ ನೀಟ್ (NEET – 2025) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಗೈದಿದ್ದಾರೆ .
ವಿದ್ಯಾರ್ಥಿಗಳಾದ ಎಚ್ ಎ ರಾಜೇಶ್ 99.8572862 ನೇ ಪರ್ಸೆಂಟೈಲ್ ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025 ನೇ ರ‍್ಯಾಂಕ್ ಪಡೆದು ಅತ್ಯದ್ಭುತ ಸಾಧನೆಗೈದಿದ್ದಾರೆ.
ಉಳಿದಂತೆ ಹೇಮಂತ್ ಕುಮಾರ್ 551, ಸಂಗೀತ ಬಿ ಎಂ 536, ಶ್ರೀನಿಧಿ ಡಿ 531, ಗಣೇಶ್ ಜಿ 519, ಮಾನಸಿ ಪಿ 468, ಸೃಷ್ಟಿ ಎಸ್ 459 ಅಂಕಗಳು ಸೇರಿದಂತೆ 500 ರ ಮೇಲೆ 5 ವಿದ್ಯಾರ್ಥಿಗಳು ಹಾಗೂ 400 ರ ಮೇಲೆ 13 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಹಾಸನ ಜಿಲ್ಲೆಗೆ ಹಾಗೂ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಕೆ. ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ರಂಜಿತ್ ಶೆಟ್ಟಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.