ತಾಲೂಕು ಮಟ್ಟದ ಕ್ರೀಡಾಕೂಟ ಹೆಚ್ ಕೆ ಎಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೆಪ್ಟೆಂಬರ್ ನಲ್ಲಿ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿ ಸಾಧನೆಗೈದಿದ್ದಾರೆ.
ಬಾಲಕರ ವಿಭಾಗದಲ್ಲಿ ಜಾವೆಲಿನ್ ಥ್ರೋ ವೇದಾಂತ್ ಗೌಡ ಎಂ ಚಿನ್ನ, 3000 ಮೀಟರ್ ಓಟ ಯಶಸ್ ಪ್ರಕಾಶ್ ಎಚ್ ಬೆಳ್ಳಿ, 4×100 ಮತ್ತು 4×400 ಬಾಲಕರ ರಿಲೇ ಬೆಳ್ಳಿ, ಶಟಲ್ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಮಾನ್ಯತಾ ಶ್ರೀನಿವಾಸ್ ಜಾವೆಲಿನ್ ಥ್ರೋ ಚಿನ್ನ, ಗುಂಡು ಎಸೆತ ಚಿನ್ನ, ಹ್ಯಾಮರ್ ಥ್ರೋ ಕಂಚು, 4× 100 ಬಾಲಕಿಯರ ರಿಲೇ ಬೆಳ್ಳಿ, ಪ್ರೇಕ್ಷಿತ ಎ ಎತ್ತರ ಜಿಗಿತ ಕಂಚು, ಘನವೀಣ ಯು 100 ಮತ್ತು 400 ಮೀಟರ್ ಓಟ ಕಂಚು, ದಿವ್ಯಶ್ರೀ ಎಸ್ ಪಿ ತ್ರಿವಿಧ ಜಿಗಿತ ಕಂಚು, ಶಟಲ್ ಬ್ಯಾಡ್ಮಿಂಟನ್ ಚಿನ್ನ, ಖೋಖೋ ಮತ್ತು ಥ್ರೋಬಾಲ್ ನಲ್ಲಿ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದು ನೇರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಚಿನ್ನ, ಬಾಲಕಿಯರ ನೆಟ್ ಬಾಲ್ ಬೆಳ್ಳಿ, ಬಾಲಕಿಯರ ಬ್ಯಾಸ್ಕೆಟ್ಬಾಲ್ ಚಿನ್ನ, ಬಾಲಕರ ನೆಟ್ ಬಾಲ್ ಬೆಳ್ಳಿ ಪದಕಗಳನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಅದ್ಭುತ ಸಾಧನೆಯನ್ನು ಗೈದಿದ್ದಾರೆ.
ವಿಜೇತರನ್ನು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ಮಹೇಶ್ ಕುಮಾರ್ ಸಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.