CSEET ಜನವರಿ ಆವೃತ್ತಿಯ ಪರೀಕ್ಷ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ.
ICSI ಬೋರ್ಡ್ ನಿಂದ ನಡೆಸಲ್ಪಡುವ ದೇಶದ ಅತಿ ಕ್ಲಿಷ್ಟಕರ ಪರೀಕ್ಷೆಗಳಲ್ಲಿ ಒಂದಾದ CSEET ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ.
ದೇಶದಲ್ಲಿ ಕಂಪನಿ ಸೆಕ್ರೆಟರಿ ಪರೀಕ್ಷೆಯ ಅರ್ಹತೆಗಾಗಿ ನಡೆಯುವ CSEET ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 60 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಗೊಂಡು ಮುಂದಿನ CS ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 200ಕ್ಕೆ ಅತಿ ಹೆಚ್ಚು 169 ಅಂಕವನ್ನು ಪಡೆದ ಸಾಯಿ ಪ್ರಸಾದ್ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ, ಕಿಶನ್ ಎನ್ .157, ಮಂಗಿಲಾಲ್ 157 ಅಂಕವನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಜತಿನ್ ಹರೀಶ್ 144, ಸ್ಪೂರ್ತಿ ಯು.ಎ.143, ಭೂಮಿಕ ಸುಬ್ರಾಯ ಹೆಗ್ಡೆ 137, ಚಿನ್ಮಯ್ ಆರ್. 134, ವರುಣ್ ಚಂದ್ರಶೇಖರ್ 130 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ120 ಕ್ಕಿಂತ ಅಧಿಕ ಅಂಕಗಳನ್ನು 15 ವಿದ್ಯಾರ್ಥಿಗಳು, 110ಕ್ಕಿಂತ ಅಧಿಕ ಅಂಕಗಳನ್ನು 21 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಸಹ ಸಂಸ್ಥಾಪಕರು , ಉಪನ್ಯಾಸಕ ವರ್ಗದವರು ಮತ್ತು ಪರೀಕ್ಷೆಯ ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್ ಅಭಿನಂದನೆ ಸಲ್ಲಿಸಿದ್ದಾರೆ.