ಸಿ ಎಸ್ ಇ ಇ ಟಿ ಪರೀಕ್ಷೆಯಲ್ಲಿ ಹೆಚ್ ಕೆ ಎಸ್ ಕಾಲೇಜಿನ ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ರವರು 10 ಜನವರಿ 2026 ರಂದು ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಹಾಸನದ ಪ್ರತಿಷ್ಠಿತ ಸಂಸ್ಥೆಯಾದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನ 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಅದ್ಬುತ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಶರ್ವಾಣಿ ವಿ(135), ವಿಶಾಲ್ ತ್ರಿಪಾಠಿ (129), ತುಳಸಿ ಶ್ರೀ ಆರ್(128), ಆಯೇಷಾ ಅಕ್ರಮ್ (125), ಗೌತಮ್ ಸಿ (116), ಪೂನಂ(114), ಟಿ .ಎಂ.ನಾಗನಮನ್ (113),ಕುಶಾಲ್ ಹೆಚ್.ಎಸ್ (112),ವರ್ಷ ಎ .(109), ಹೆಚ್ ಆರ್ ತೇಜಸ್( 108),ಆಶೀಶ್ ಮುಕುಂದ್ ಬಿ (107),ಅನಘ ಎಂ.ಎನ್ (106), ಲಿಕಿನ್ ಕೆ. ಎಸ್( 106), ಮನೀಶ್ ಎನ್( 103), ಸಿ.ರೂಪೇಶ್( 101), ಜೀವನ್ ಗೌಡ( 101), ಅರವಿಂದ್ ಗೌಡ ಎಂ( 100), ಧನುಷ್ ಗೌಡ ಬಿ.ಕೆ( 100), ಕೃಪದ ಜಯದೀಪ್( 100), ಮೋಹಿತ್ ಎ.ಎಸ್( 100), ಪೂರ್ಣೇಶ್ ಗೌಡ( 100), ರೋಹಿತ್ ರಾಜ್( 100), ತ್ರಿಶತ ಕೆ ಎಸ್( 100), ಯಶರಾಜ್ (100), ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.
ಪ್ರಸ್ತುತ ಬಹುಬೇಡಿಕೆಯುಳ್ಳ ಈ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗೆ ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿದ್ದು, ಸಿ ಎ , ಸಿ ಎಸ್ ಇ ಇ ಟಿ ತರಬೇತಿ ನೀಡುತ್ತಿರುವ ಹಾಸನ ಜಿಲ್ಲೆಯ ಪ್ರಮುಖ ಸಂಸ್ಥೆಯಾಗಿದೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಂಯೋಜಕರಾದ ಶ್ರೀ ಕೃಷ್ಣಪ್ರಕಾಶ್ ಪಿ.ಪಿ.ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.