Follow us:-
ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್‌ ಸಂಸ್ಥೆಯ 19 ವಿದ್ಯಾರ್ಥಿಗಳು ತೇರ್ಗಡೆ:
  • By CREATIVE ADMIN
  • June 1, 2026
  • No Comments

ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್‌ ಸಂಸ್ಥೆಯ 19 ವಿದ್ಯಾರ್ಥಿಗಳು ತೇರ್ಗಡೆ:

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ  ಅತಿ ಕ್ಲಿಷ್ಟಕರವೆನಿಸಿದ  ಪರೀಕ್ಷೆಗಳಲ್ಲೊಂದಾದ  ಜೆಇಇ ಅಡ್ವಾನ್ಸ್ – 2026 ನೇ ಸಾಲಿನ  ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ನಾಗದೇವ್ ಎಂ.ಜಿ.  ಜನರಲ್‌ ಮೆರಿಟ್‌ ವಿಭಾಗದಲ್ಲಿ 1749 ನೇ ರ‍್ಯಾಂಕ್‌ ಮತ್ತು ಕೆಟಗರಿ ವಿಭಾಗದಲ್ಲಿ 196ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಧನುಷ್ ಎಚ್. ಎ. ಜನರಲ್‌ ಮೆರಿಟ್‌ ವಿಭಾಗದಲ್ಲಿ 16200 ನೇ ರ‍್ಯಾಂಕ್‌ ಮತ್ತು ಕೆಟಗರಿ ವಿಭಾಗದಲ್ಲಿ 2193ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.  ಹಾಗೂ ಕೆಟಗರಿ ವಿಭಾಗದಲ್ಲಿ ಖುಷಿ ರಾಜ ವಿ. 648, ದಿಶಾಂತ್ ಎಂ.1207, ರಶ್ಮಿ ಆರ್. ಎಚ್. 1754, ನಯನ ಡಿ ಗೊಂಡ 2638, ಸೃಜನಾ ಎಸ್. 3618 ಶಶಾಂಕ್ ಡಿ. ಎಸ್. 3800, ಹೃತಿಕ್ ಮಹೇಶ್ 3803, ತೇಜಸ್ ಆರ್. ಬಿ. 5124, ಸುಜನ್ ಕೆ. ಎಚ್. 5377, ವಿಶ್ವಾಸ್ ಕೆ. ಎನ್. 5549, ಧ್ರುವ ವಿ. ಬಿ. 6057, ನಮಿತ್ ಕೆ. ಹೆಗ್ಡೆ 8164, ಪ್ರಥಮ್ ಟಿ. 10982, ಧ್ರುಶ್ 11103, ನೀನಾದ್ ರಾಜೇಶ್ ನಾಯ್ಕ್ 12563, ಸಂವಿತ್ ಎ. ಗೋಕರ್ಣ 19289, ಪ್ರಜ್ವಲ್ ಭಟ್ 16885 ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಐಐಟಿ, ಐಐಎಸ್ಸಿ, ಐಐಎಸ್‌ಸಿಆರ್‌ ನಂತಹ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಗಳಿಸಿರುತ್ತಾರೆ.

ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಅಡ್ವಾನ್ಸ್ ಪರೀಕ್ಷೆಯ ಸಂಯೋಜಕರಾದ ಶ್ರೀ ತಿರುಮಲಾ ರೆಡ್ಡಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *