ಕ್ರಿಯೇಟಿವ್ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಐಐಎಸ್ಇಆರ್ನಲ್ಲಿ ಅರ್ಹತೆ
ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಾದ IISER Aptitude Test (IAT–2025) ಫಲಿತಾಂಶವು ಜೂನ್ 30, 2026 ರಂದು ಪ್ರಕಟವಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ವಿಜ್ಞಾನ ಕ್ಷೇತ್ರದ ಈ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.
ಸಂಸ್ಥೆಯ ವಿದ್ಯಾರ್ಥಿ ತೇಜಸ್ ಆರ್ ಬಿ ರಾಷ್ಟ್ರಮಟ್ಟದಲ್ಲಿ 17ನೇ ರ್ಯಾಂಕ್ ( ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 388ನೇ ರ್ಯಾಂಕ್, ಹೃತಿಕ್ ಮಹೇಶ್ ರಾಷ್ಟ್ರಮಟ್ಟದಲ್ಲಿ 35ನೇ ರ್ಯಾಂಕ್ ( ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 949ನೇ ರ್ಯಾಂಕ್, ನಾಗದೇವ್ ಎಮ್ ಜಿ ರಾಷ್ಟ್ರಮಟ್ಟದಲ್ಲಿ 38ನೇ ರ್ಯಾಂಕ್ ( ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 922ನೇ ರ್ಯಾಂಕ್, ಲೇಖನ್ ಕಾರಿಯಪ್ಪ ಎಂ ಡಿ ರಾಷ್ಟ್ರಮಟ್ಟದಲ್ಲಿ 66ನೇ ರ್ಯಾಂಕ್ ( ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 1409ನೇ ರ್ಯಾಂಕ್ ಗಳಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ (IISER) ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಸಾಧನೆ ಅತ್ಯಂತ ಸಂತೋಷದ ಸಂಗತಿಯಾಗಿದೆ.
ಉಳಿದಂತೆ ಲಾಸ್ಯ ಎಸ್ ಶೆಟ್ಟಿ 339, ಬಗನಾಲ್ ಆಶ್ರೀತ್ ನಂದನ್ 572, ಇಂಚರಾ ಆರ್ 907, ವಿಶ್ವೇಶ್ ಎನ್ ಹೆಚ್ 1474, ತರುಣ್ ಸಾಗರ್ 2362, ಶರ್ವಾಣಿ 2490, ಪ್ರಣವ್ ಎಂ ಗೌಡರ್ 3016, ರಿಯಾ ರೆಬೆಲ್ಲೊ 3487, ಅನುಷ್ಕಾ ಜನರ್ 3642, ಸಜನಿ ಸೋಮಶೇಖರ್ ಬೋವಿ 5021, ದೀಪಕ್ ವಿರಪ್ಪ ಗಡಿಗೋರ್ 5222, ವಿರಾಜ್ ಗುರುಗೌಡ ಪಾಟೀಲ್ 6012, ಸುದೀಕ್ಷಾ ಸುವರ್ಣ 6532, ಜೆ ಎ ಆದರ್ಶ್ 8163, ಸಾಂಗವಿ ಸುಭಾಸ್ ಚಂದ್ರ ಶೆಟ್ಟಿ 9395 ರ್ಯಾಂಕ್ ಗಳಿಸಿ ಸಂಸ್ಥೆಯ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER) ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಪ್ರಖ್ಯಾತ ವಿಜ್ಞಾನ ಸಂಸ್ಥೆಗಳಾಗಿದ್ದು, ಇಲ್ಲಿ ಪ್ರವೇಶ ಪಡೆಯುವುದು ಬಹಳ ಗೌರವದ ವಿಷಯ. IISER Aptitude Test (IAT) ಅನ್ನು ಪ್ರತಿವರ್ಷ ನಡೆಸಲಾಗುತ್ತಿದ್ದು, ವಿಜ್ಞಾನ ಅಧ್ಯಯನದಲ್ಲಿ ಉತ್ಸಾಹ ಹಾಗೂ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ಮಹತ್ವದ್ದಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.