Follow us:-
ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ, ಹಾಗೂ ದೀಪಾವಳಿ ಸಂಭ್ರಮ.
  • By CREATIVE ADMIN
  • November 1, 2025
  • No Comments

ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ, ಹಾಗೂ ದೀಪಾವಳಿ ಸಂಭ್ರಮ.

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಕನ್ನಡ ನಾಡು ನುಡಿಯ ಸಂಕೇತವಾದ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು, ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಹೆಗಡೆ ಕನ್ನಡ ಭಾಷೆಯ ಹಿರಿಮೆಯ ಕುರಿತು ಮಾತನಾಡಿದರು, ಕನ್ನಡ ಉಪನ್ಯಾಸಕ ಆದರ್ಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಜೆ ೬ – ೩೦ ರಿಂದ  ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ದೀಪಾವಳಿ ಸಂಭ್ರಮದ ಶೀರ್ಷಿಕೆಯ ಅಡಿಯಲ್ಲಿ  ದೀಪಾವಳಿ ಹಬ್ಬ ಹಾಗೂ ತುಳಸಿ ಪೂಜೆ ನೆರವೇರಿತು ಹಣತೆಗಳನ್ನು ಬೆಳಗುವುದರ ಜೊತೆಗೆ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು,

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರುಗಳಾದ,  ವಿದ್ವಾನ್ ಗಣಪತಿ ಭಟ್,  ಅಶ್ವತ್ ಎಸ್ ಎಲ್, ಗಣನಾಥ್ ಶೆಟ್ಟಿ,  ಗಣಪತಿ ಭಟ್ ಕೆ ಎಸ್,  ಅಮೃತ್ ರೈ,  ಆದರ್ಶ್ ಎಮ್‌ ಕೆ ಉಪಸ್ಥಿತರಿದ್ದರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Leave a Reply

Your email address will not be published. Required fields are marked *