ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 9 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ವಿಭಾಗದಲ್ಲಿ ಉನ್ನತ ರ‍್ಯಾಂಕ್ ಗಳನ್ನು ಗಳಿಸಿದ್ದಾರೆ.
ಕ್ರಿಯೇಟಿವ್ ನ ವಿದ್ಯಾರ್ಥಿಗಳಾದ ಪೂರ್ವಿಕ್ ಕೆ. ಸಿ ರಾಜ್ಯಕ್ಕೆ 21ನೇ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಉಳಿದಂತೆ ಕ್ರಮವಾಗಿ ವಿದ್ಯಾರ್ಥಿಗಳಾದ ರೋಷನಿ ಪಿ ಪಾಲೇಕರ್ 50, ಮಾನಸಿ ಪಿ 56, ತ್ರಿಶ್ಲಾ ಗಾಂಧಿ 64, ಸುಪ್ರಿಯ ಕೆ ಎಚ್ 65, ಪ್ರಕೃತಿ ಎನ್ 79, ಎಚ್ ಎ ಭುವನ್ 81, ನಾಗಗೌಡರ ಶ್ರೀನಿವಾಸ್ ಆರ್ 88, ಟಿ ಎಸ್ ರಿತಿಕಾ 96ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಸ್ತುತ ಬಹುಬೇಡಿಕೆಯನ್ನು ಹೊಂದಿರುವ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಆರ್ಕಿಟೆಕ್ಚರ್ ಸಂಸ್ಥೆಗಳಿಗೆ ಸೇರಲು ನಡೆಯುವ ರಾಷ್ಟ್ರ ಮಟ್ಟದ NATA (ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ ಫಾರ್ ಆರ್ಕಿಟೆಕ್ಚರ್) ಪ್ರವೇಶ ಪರೀಕ್ಷೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು, ಸಂಯೋಜಕರಾದ ರಕ್ಷಿತ್ ಬಿ.ಎಸ್, ಸುಮಂತ್ ದಾಮ್ಲೆ, ಶರತ್ ರವರು ಅಭಿನಂದಿಸಿದ್ದಾರೆ.