ಹೆಚ್ ಕೆ ಎಸ್ ನ ಚಿನ್ಮಯಿ ಆರ್ NIFT ಬೆಂಗಳೂರಿಗೆ ಆಯ್ಕೆ
NIFT (National institute of fashion technology) ನಲ್ಲಿ ಬಿ ಡಿಸೈನ್ ಮತ್ತು ಬಿ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಸೀಟು ಹಂಚಿಕೆಯ ಅಂತಿಮ ಆಯ್ಕೆ ಪ್ರಕ್ರಿಯೆ ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಚಿನ್ಮಯಿ ಆರ್ NIFT ಬೆಂಗಳೂರಿನ Apparel production ಕೋರ್ಸಿಗೆ ಸೀಟನ್ನು ಪಡೆದುಕೊಂಡಿದ್ದಾರೆ.
ದೇಶದ ಪ್ರತಿಷ್ಠಿತ NIFT ಕೇಂದ್ರಗಳಲ್ಲಿ ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್ ಮುಂತಾದ ಬಹುಬೇಡಿಕೆಯುಳ್ಳ ಕೋರ್ಸ್ ಗಳಲ್ಲಿ ಪದವಿ ಪಡೆಯಬಹುದಾಗಿದೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ರಕ್ಷಿತ್ ಬಿ. ಎಸ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.