Follow us:-
ಜೆ ಇ ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅಮೋಘ ಸಾಧನೆ
  • By Creative Media Team
  • April 19, 2025
  • No Comments

ಜೆ ಇ ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅಮೋಘ ಸಾಧನೆ

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆ ಇ ಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ  202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆ ಇ ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.7656463 ಪರ್ಸೆಂಟೈಲ್ ಮೂಲಕ AIR (ಆಲ್ ಇಂಡಿಯಾ ರ್‍ಯಾಂಕ್) 733ನೇ ಕೆಟಗರಿ ರ್‍ಯಾಂಕ್, ಸಾನಿಕ ಕೆ. ಎನ್ 99.5385594 ಪರ್ಸೆಂಟೈಲ್, ಮೋಹಿತ್. ಎಂ 99.4982099 ಪರ್ಸೆಂಟೈಲ್ ಮೂಲಕ 29ನೇ ಕೆಟಗರಿ ರ್‍ಯಾಂಕ್, ಸುಮಂತ ಗೌಡ ಎಸ್. ಡಿ 99.1307112 ಪರ್ಸೆಂಟೈಲ್,  ಎಚ್. ಎ ರಾಜೇಶ್  99.1055485 ಪರ್ಸೆಂಟೈಲ್, ಎಂ. ಮಂಜುನಾಥ್  99.0174525 ಪರ್ಸೆಂಟೈಲ್, ಟಿ. ಪ್ರದೀಪ್ 98.7911580 ಪರ್ಸೆಂಟೈಲ್ ಮೂಲಕ 103ನೇ ಕೆಟಗರಿ ರ್‍ಯಾಂಕ್, ಮೋನಿಕ ಕೆ. ಪಿ 98.5400006 ಪರ್ಸೆಂಟೈಲ್ ಮೂಲಕ 126ನೇ ಕೆಟಗರಿ ರ್‍ಯಾಂಕ್, ಸಾಚಿ ಶಿವಕುಮಾರ್ ಕಡಿ 98.8500293 ಪರ್ಸೆಂಟೈಲ್, ತೇಜಸ್ ವಿ. ನಾಯಕ್ 98.7116215 ಪರ್ಸೆಂಟೈಲ್, ಹೇಮಂತ್ ಕುಮಾರ್ 98.5816187 ಪರ್ಸೆಂಟೈಲ್, ಯೋಗೇಶ್ ದೀಪಕ್ ನಾಯ್ಕ್ 98.5210232 ಪರ್ಸೆಂಟೈಲ್, ಆಯುಷ್ ಅರ್ಜುನ್. ಪಿ 98.4342521 ಪರ್ಸೆಂಟೈಲ್, ಗಣೇಶ್.ಜಿ 98.312243 ಪರ್ಸೆಂಟೈಲ್, ಪ್ರಜ್ವಲ್ ಎಸ್. ಎನ್ 98.2372876 ಪರ್ಸೆಂಟೈಲ್, ಪ್ರಜ್ವಲ್ ಪಿ. ನಾಯ್ಕ್ 98.084407 ಪರ್ಸೆಂಟೈಲ್ ಗಳಿಸಿದ್ದಾರೆ.

ಎಚ್. ಎ ರಾಜೇಶ್ ಭೌತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಗಳಿಸುವ ಜೊತೆಗೆ ಸುಮಾರು 30 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಗಳಿಸಿರುತ್ತಾರೆ.

99 ಪರ್ಸೆಂಟೈಲಿಗಿಂತ ಅಧಿಕ 06 ವಿದ್ಯಾರ್ಥಿಗಳು, 98ಕ್ಕಿಂತ ಅಧಿಕ 16, 95ಕ್ಕಿಂತ ಅಧಿಕ 54, 90 ಪರ್ಸೆಂಟೈಲ್ ಗಿಂತ ಮೇಲ್ಪಟ್ಟು 120 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು  ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಲಯಗಳಾದ ಎನ್ ಐ ಟಿ, ಐ ಐ ಐ ಟಿ ಮೊದಲಾದ ಸಂಸ್ಥೆಗಳಲ್ಲಿ ಬಿ. ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ ಐ ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.

ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆ ಇ ಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ ಮತ್ತು ವಿನಯಕುಮಾರ್ ರವರು  ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *