Follow us:-
ಎಕನೋವನ್ಸಾ ವಿವಿಧ ಸ್ಪರ್ಧಾವಳಿ : ಕ್ರಿಯೇಟಿವ್ ಕಾಲೇಜಿಗೆ ಚಾಂಪಿಯನ್ ಶಿಪ್ ಗರಿ
  • By Lishan Gowda
  • July 30, 2025
  • No Comments

ಎಕನೋವನ್ಸಾ ವಿವಿಧ ಸ್ಪರ್ಧಾವಳಿ : ಕ್ರಿಯೇಟಿವ್ ಕಾಲೇಜಿಗೆ ಚಾಂಪಿಯನ್ ಶಿಪ್ ಗರಿ

ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಮರ್ಸ್ ಫೆಸ್ಟ್ ಪ್ರಯುಕ್ತ ನಡೆಸಲ್ಪಟ್ಟ ಎಕನಾವಾಂಝ ಇಂಟರ್ ಕಾಲೇಜುಗಳ ವಿವಿಧ ಸ್ಪರ್ಧಾವಳಿಗಳಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಚಾಂಪಿಯನ್ ಶಿಪ್ ನೊಂದಿಗೆ, ನಗದು ಪುರಸ್ಕಾರವನ್ನು ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.ವಿದ್ಯಾರ್ಥಿಗಳಾದ ಆದ್ಯ ಪಡ್ರೆ, ಚಿರಾಯು, ಸುಜೀತ್, ಶ್ರೇಯಸ್, ಮಂಗಿಲಲ್, ಅನ್ವಿತ್, ಕಿಶನ್, ಚಿನ್ಮಯ್, ಸೃಷ್ಟಿ, ಅರುಷಿ, ಸೋನಿಯಾ, ಸಂಜನಾ, ಪ್ರೇರಣಾ, ಹರ್ಷಿತ, ಅನಿಷಾ,ವೃದ್ಧಿ, ದ್ಯುತಿ, ಪೂರ್ವಿ ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ಯನ್ನು ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *