ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ಕಾಲೇಜಿನ ಅತ್ಯದ್ಭುತ ಸಾಧನೆ
ಪಿ.ಯು.ಸಿ ವಿದ್ಯಾರ್ಥಿಗಳಿಗೆ ಏಪ್ರಿಲ್ ಮಾರ್ಚ್ 1 ರಿಂದ 20 ರ ವರೆಗೆ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಾಸನದ ಪ್ರತಿಷ್ಠಿತ ಸಂಸ್ಥೆಯಾದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜು ಹಾಸನ ಇಲ್ಲಿನ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶ್ರೀನಿಧಿ ಡಿ 591, ಕೀರ್ತನಾ ಬಿ 585, ಪ್ರೀತಿ ಸಿ ಎಲ್ 582, ಸಂಗೀತ ಬಿ ಎಂ 580, ಗಣೇಶ ಜಿ 579, ಶ್ರೇಯಾ ಎಂ ಐ 579 ಅಂಕಗಳನ್ನು ಗಳಿಸಿಕೊಂಡಿದ್ದು ಒಟ್ಟು 100 ಪ್ರತಿಶತ ಫಲಿತಾಂಶ ಪಡೆದಿದ್ದು ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ರೇಷ್ಮಾ ಜಿಕೆ 589, ಪಾವನ ಆರ್ 582, ರೋಹನ್ ಪವನ್ ರೆಡ್ಡಿ ಎಂ 581, ಸಮನ್ವೀ ಎಚ್ ಆರ್ 580 ಅಂಕಗಳನ್ನು ಪಡೆದಿದ್ದು ಒಟ್ಟು 98.33 ಪ್ರತಿಶತ ಫಲಿತಾಂಶ ಗಳಿಸಿಕೊಂಡಿದೆ. 325 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 167 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ಹಾಗೂ ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಭೌತಶಾಸ್ತ್ರ 01, ರಸಾಯನಶಾಸ್ತ್ರ 03, ಗಣಿತಶಾಸ್ತ್ರ 03, ಜೀವಶಾಸ್ತ್ರ 07, ಗಣಕ ವಿಜ್ಞಾನ 09, ಮೂಲ ಗಣಿತ 04, ಕನ್ನಡ 04 ಹಾಗೂ ಸಂಸ್ಕೃತದಲ್ಲಿ 14 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.