ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆಯ ರ‍್ಯಾಂಕಿಂಗ್ ನಲ್ಲಿ ಹೆಚ್.ಕೆ.ಎಸ್. ವಿದ್ಯಾರ್ಥಿಗಳ ಅದ್ಭುತ ಸಾಧನೆ.
NATA ವಿದ್ಯಾರ್ಥಿಗಳಿಗೆ ಏಪ್ರಿಲ್, ಮೇ, ಜೂನ್ ನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಈ ಅದ್ಭುತ ಸಾಧನೆ ಗೈದಿದ್ದಾರೆ .
ಪ್ರಸ್ತುತ ಬಹುಬೇಡಿಕೆಯನ್ನು ಹೊಂದಿರುವ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಆರ್ಕಿಟೆಕ್ಚರ್ ಸಂಸ್ಥೆಗಳಿಗೆ ಸೇರಲು ನಡೆಯುವ ರಾಷ್ಟ್ರ ಮಟ್ಟದ NATA (ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ ಫಾರ್ ಆರ್ಕಿಟೆಕ್ಚರ್) ಪ್ರವೇಶ ಪರೀಕ್ಷೆಗೆ ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿರುವ ಹಾಸನ ಜಿಲ್ಲೆಯ ಏಕೈಕ ಸಂಸ್ಥೆಯಾಗಿದೆ.
ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯ ಮಟ್ಟದಲ್ಲಿ ಪೂರ್ವಿಕ್ ಕೆ ಸಿ ರಾಜ್ಯಕ್ಕೆ 21ನೇ ರ‍್ಯಾಂಕ್ ಗಳಿಸಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮಾನಸಿ ಪಿ 56 ನೇ ರ‍್ಯಾಂಕ್, ತ್ರಿಶ್ಲ ಗಾಂಧಿ 64 ನೇ ರ‍್ಯಾಂಕ್, ಹೆಚ್ ಎ ಭುವನ್ 81ನೇ ರ‍್ಯಾಂಕ್ ಗಳಿಸಿಕೊಂಡಿರುತ್ತಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ರಕ್ಷಿತ್ ಬಿ. ಎಸ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.