INDIAN STATISTICAL INSTITUTE -ISI ಪ್ರವೇಶ ಪರೀಕ್ಷೆಯಲ್ಲಿ ಹೆಚ್ ಕೆ ಎಸ್ ವಿದ್ಯಾರ್ಥಿಯ ಅಮೋಘ ಸಾಧನೆ.
ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ – ISI ಕೊಲ್ಕತ್ತಾ ಇವರು ಬ್ಯಾಚುಲರ್ ಆಫ್ ಮ್ಯಾಥಮೆಟಿಕ್ಸ್ ಹಾಗೂ ಬ್ಯಾಚುಲರ್ ಆಫ್ ಸ್ಟಾಟಿಸ್ಟಿಕ್ಸ್ ಮತ್ತು ಡೇಟಾ ಸೈನ್ಸ್ ಕೋರ್ಸ್ಗೆ ಪ್ರವೇಶಾತಿ ಪಡೆಯಲು ಮೇ 2025 ರಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಚೇತನ್ ಗೌಡ ಎನ್ ಎಸ್ ರಾಷ್ಟ್ರಮಟ್ಟದಲ್ಲಿ 29 (ಕೆಟಗರಿಯಲ್ಲಿ 05) ನೇ ರ್ಯಾಂಕ್ ಪಡೆದು ಅತ್ಯದ್ಭುತ ಸಾಧನೆಗೈದಿದ್ದಾರೆ.
ISI ನಲ್ಲಿ ಸಂಶೋಧನೆಯ ಪ್ರಮುಖ ಕ್ಷೇತ್ರಗಳು ಅಂಕಿ ಅಂಶಗಳು, ಗಣಿತ, ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಅರ್ಥಶಾಸ್ತ್ರ. ಇದು ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಕೋರ್ಸ್ ಗಳನ್ನು ನೀಡುವ ಕೆಲವೇ ಸಂಶೋಧನಾ ಆಧಾರಿತ ಭಾರತೀಯ ಸಂಸ್ಥೆಗಳಲ್ಲಿ ಒಂದಾಗಿದೆ.
ಸಾಧಕ ವಿದ್ಯಾರ್ಥಿಯನ್ನು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್ ಕೆ ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್ ಎಸ್ ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಎಲ್ಲಾ ಬೋಧಕ ಬೋಧಕರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.