IISER ಪರೀಕ್ಷೆಯಲ್ಲಿ ಹೆಚ್ ಕೆ ಎಸ್ ವಿದ್ಯಾರ್ಥಿಗಳ ಸಾಧನೆ.
ಭಾರತದ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಾದ IISER ಆಪ್ಟಿಟ್ಯೂಡ್ ಟೆಸ್ಟ್ (IAT-2025) ಫಲಿತಾಂಶ ಜೂನ್ 24, 2025 ರಂದು ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆಗೈದಿದ್ದಾರೆ.
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER) ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಪ್ರಖ್ಯಾತ ವಿಜ್ಞಾನ ಸಂಸ್ಥೆಗಳಾಗಿದ್ದು, ಇಲ್ಲಿ ಪ್ರವೇಶ ಪಡೆಯುವುದು ಬಹಳ ಗೌರವದ ವಿಷಯ. IISER Aptitude Test (IAT) ಅನ್ನು ಪ್ರತಿವರ್ಷ ನಡೆಸಲಾಗುತ್ತಿದ್ದು, ವಿಜ್ಞಾನ ಅಧ್ಯಯನದಲ್ಲಿ ಉತ್ಸಾಹ ಹಾಗೂ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ಮಹತ್ವದ್ದಾಗಿದೆ.
ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್ ಎಸ್ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ 1718 (ಕೆಟಗರಿ 314) ನೇ ರ್‍ಯಾಂಕ್ ಮತ್ತು ತ್ರಿಶ್ಲ ಗಾಂಧಿ ಜನರಲ್ ಮೆರಿಟ್ ನಲ್ಲಿ 9190 (ಕೆಟಗರಿ 667) ನೇ ರ್‍ಯಾಂಕ್, ಉಳಿದಂತೆ ಪ್ರಜ್ವಲ್ ಹೆಚ್ ಜಿ ಜನರಲ್ ಮೆರಿಟ್ ನಲ್ಲಿ 22027 ನೇ ರ್‍ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಸಂಯೋಜಕರಾದ ಆದಿತ್ಯ ವಟಿ ಕೆ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.