COMEDK UGET ಪರೀಕ್ಷೆಯಲ್ಲಿ ಹೆಚ್ ಕೆ ಎಸ್ ನ ವಿದ್ಯಾರ್ಥಿ ರಾಷ್ಟ್ರಕ್ಕೆ 43 ನೇ ರ‍್ಯಾಂಕ್
ದಿನಾಂಕ : 10.05.2025 ರಂದು (ಕರ್ನಾಟಕ ವೈದ್ಯಕೀಯ ಇಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ) ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಮಟ್ಟದ ಅಂಡರ್ ಗ್ರಾಜುಯೆಟ್ ಪ್ರವೇಶ ಪರೀಕ್ಷೆ (UGET-2025)ಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆಗೈದಿದ್ದಾರೆ.
ಭಾರತದಾದ್ಯಂತ ಈ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ದು COMEDK ಬ್ಯಾನರ್ ಅಡಿಯಲ್ಲಿ ಕರ್ನಾಟಕದ 150ಕ್ಕೂ ಹೆಚ್ಚು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಬಹುದಾಗಿದ್ದು ಜೊತೆಗೆ ಕರ್ನಾಟಕದ ಹೊರಗಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಬಿ ಇ / ಬಿ ಟೆಕ್ ಪ್ರವೇಶಕ್ಕಾಗಿ COMEDK ಅಂಕಗಳನ್ನು ಸ್ವೀಕರಿಸಿವೆ. ಇದು ದೇಶದಲ್ಲಿ ಅತ್ಯಂತ ಸಮಗ್ರ ಖಾಸಗಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ.
ವಿದ್ಯಾರ್ಥಿಯಾದ ಚೇತನ್ ಗೌಡ ಎನ್ ಎಸ್ ರಾಷ್ಟ್ರಮಟ್ಟದಲ್ಲಿ 43 ನೇ ರ‍್ಯಾಂಕ್ ಪಡೆದು ಅದ್ಭುತವಾದ ಸಾಧನೆ ಮಾಡಿದ್ದಾರೆ. ಉಳಿದಂತೆ ಹೆಚ್ ಎ ರಾಜೇಶ್ 1169, ಸಂಗೀತ ಬಿ ಎಂ 2540, ಹೇಮಂತ್ ಕುಮಾರ್ 2869, ಗಣೇಶ್ ಜಿ 3447, ತ್ರಿಶ್ಲ ಗಾಂಧಿ 3828, ಪ್ರೇಕ್ಷಾ ಸಿ 7080, ಶ್ರೀವತ್ಸ ಎನ್ 7827 ನೇ ರ‍್ಯಾಂಕ್‌ಗಳೊಂದಿಗೆ ಉತ್ತೀರ್ಣರಾಗಿದ್ದು ಕಾಲೇಜಿಗೆ ಹಾಗೂ ಹಾಸನ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಂಯೋಜಕರಾದ ರಂಜಿತ್ ಶೆಟ್ಟಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.