ಹಾಸನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹೆಚ್.ಕೆ.ಎಸ್ ನ ಅದ್ಭುತ ಸಾಧನೆ
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್.ಕೆ. ಎಸ್ ಪಿ ಯು ಕಾಲೇಜು ಹಾಸನ. ದಿನಾಂಕ 19.11.2025ನೇ ಬುಧವಾರದಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ 2025- 26ನೇ ಶೈಕ್ಷಣಿಕ ಸಾಲಿನ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಪಡೆದುಕೊಂಡಿದೆ.
ಮನೋಜ್ ಗೌಡ ಪಿ ಎಂ ರಸಪ್ರಶ್ನೆ ಪ್ರಥಮ, ಭಾರ್ಗವಿ ಎಸ್ (ಕನ್ನಡ) ಚರ್ಚಾ ಸ್ಪರ್ಧೆ ಪ್ರಥಮ, ಸಾನ್ವಿ ಎಂ ಜಾನಪದ ಗೀತೆ ಪ್ರಥಮ, ವಂಶಿಕ ಡಿ ಆರ್ (ಆಂಗ್ಲ) ಪ್ರಬಂಧ ಸ್ಪರ್ಧೆ ದ್ವಿತೀಯ, ರುಷಾನಿ ಡಿ ಎಲ್ (ಆಂಗ್ಲ) ಚರ್ಚಾ ಸ್ಪರ್ಧೆ ತೃತೀಯ, ಸಾಂಘವಿ ಎಸ್ ವಿಜ್ಞಾನ ಮಾದರಿ ತಯಾರಿಕೆ ತೃತೀಯ, ಗೌರಿ ಬಿ ಎಸ್ ಏಕಪಾತ್ರಾಭಿನಯ ತೃತೀಯ, ಅಪೇಕ್ಷ ಆರ್ ರಾವ್ ಭಾವಗೀತೆ ತೃತೀಯ ಬಹುಮಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಅದ್ಭುತ ಸಾಧನೆಗೈದಿದ್ದಾರೆ.
ವಿಜೇತರನ್ನು ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಪ್ರವೀಣ್ ಎಂ ಜಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.