Follow us:-
ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿ. ಯು. ಕಾಲೇಜು
  • By Creative Media Team
  • April 23, 2025
  • No Comments

ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿ. ಯು. ಕಾಲೇಜು

ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣಪುರದ ತ್ರಿಶಾ ಪ. ಪೂ. ಕಾಲೇಜಿನ ಶೈಕ್ಷಣಿಕ ಸಹಭಾಗಿತ್ವ ವಹಿಸಿಕೊಂಡಿತು. ಈಗಾಗಲೇ ಪಿ. ಯು ಫಲಿತಾಂಶದಲ್ಲಿ ಆರಂಭಿಕ ವರ್ಷದಲ್ಲೇ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಸಂಸ್ಥೆ ಉಡುಪಿಯ ಶಾಖೆಯಲ್ಲೂ ಆ ಯಶಸ್ಸನ್ನು ಮುಂದುವರೆಸಿದೆ. ತನ್ನ ಪ್ರಥಮ ವರ್ಷದ ಫಲಿತಾಂಶದಲ್ಲೇ 100% ಗಳಿಸುವುದರ ಜೊತೆಗೆ ಪಿ. ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಕೀರ್ತಿ ಗಳಿಸಿದೆ. 94 ಮಕ್ಕಳೊಂದಿಗೆ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯ ಹಸಿವನ್ನು ಮಾತ್ರ ಬೆಳೆಸದೆ ಜೀವನ ಮೌಲ್ಯಗಳು, ನೈತಿಕತೆ, ಸದ್ವಿಚಾರಗಳನ್ನು ಪ್ರತಿನಿತ್ಯ ಬೋಧಿಸುತ್ತಿರುವುದು ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.
ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಯಶಸ್ಸಿನ ಪಯಣ
· ಸಂಸ್ಥೆ ಪ್ರಾರಂಭದ ವರ್ಷದಲ್ಲೇ 100% ಫಲಿತಾಂಶ
· ಉತ್ತಮ ವ್ಯವಸ್ಥಿತವಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳು
· ಪ್ರತ್ಯೇಕ ಅಧ್ಯಯನ ಕೊಠಡಿಗಳು
· ಪೌಷ್ಠಿಕಾಂಶಯುಕ್ತ ಆಹಾರ, ಹಿತವೆನಿಸುವ ತಿಂಡಿ ತಿನಿಸುಗಳು
· ಪ್ರತೀ ವಾರವೂ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳು
· ಅತ್ಯುತ್ತಮ ಸಂಗ್ರಹ ಹೊಂದಿರುವ ಗ್ರಂಥಾಲಯ
· ಪ್ರತಿ ದಿನವೂ ಉಪನ್ಯಾಸಕರೊಂದಿಗೆ ಸಂದೇಹ ನಿವಾರಣಾ ಅವಧಿಗಳು
· ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಅತ್ಯಂತ ಅನುಭವಿ ಉಪನ್ಯಾಸಕ ವರ್ಗ

ಅತೀ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ಜೊತೆಗೆ, AIIMS, JIPMER ನಂತಹ ರಾಷ್ಟç ಮಟ್ಟದ ಮೆಡಿಕಲ್ ಸಂಸ್ಥೆಯಲ್ಲೂ ಅರ್ಹತೆ ಗಳಿಸಿದ್ದಾರೆ. B.E ಕೋರ್ಸ್ಗಾಗಿ ದೇಶದ ಉನ್ನತ ಸಂಸ್ಥೆಗಳಾಗಿರುವ IIT, NITನಂತಹ ಸಂಸ್ಥೆಗೂ ಪ್ರವೇಶಾತಿ ಪಡೆಯುವ ಮೂಲಕ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಸಂಸ್ಥೆ ಅತ್ಯುತ್ತಮ ಯಶಸ್ಸನ್ನು ಸಾಧಿಸಿದೆ. NEET, JEE, CET ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್ ಗಳಿಸುವ ಜೊತೆಗೆ NDA, NATA, IISER, UCEED VIT ನಂತಹ ಪರೀಕ್ಷೆಗಳಲ್ಲೂ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಚಾರ.

ಕ್ರಿಯೇಟಿವ್ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.

ಈ ಯೋಜನೆಗೆ www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ. ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606474298

Leave a Reply

Your email address will not be published. Required fields are marked *