Follow us:-
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಕೃಷಿ ವಿಜ್ಞಾನ ವೃತ್ತಿ ಮಾರ್ಗದರ್ಶನ ಕಾರ್ಯಗಾರ
  • By AdminCEF
  • January 25, 2024
  • No Comments

ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಕೃಷಿ ವಿಜ್ಞಾನ ವೃತ್ತಿ ಮಾರ್ಗದರ್ಶನ ಕಾರ್ಯಗಾರ

ಸಪ್ತಗಿರಿ ಕ್ಯಾಂಪಸ್ : ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬಹು ಆಯ್ಕೆಯ ಉದ್ಯೋಗಗಳಿವೆ. ವಿದ್ಯಾರ್ಥಿಗಳು ಪಿಯು ಹಂತದಲ್ಲಿಯೇ ಮುಂದಿನ ಭವಿಷ್ಯವನ್ನು ಚಿಂತನೆ ಮಾಡಿ ಸರಿಯಾದ ಕೋರ್ಸನ್ನು ಆಯ್ದು ಕೊಳ್ಳಬೇಕು ಎಂದು ಡಾ ಶ್ರೀಕಾಂತ್ ಕರೆ ನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ವಿದ್ಯಾಥಿ೯ಗಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ದೊರಕಿಸಿಕೊಳ್ಳುವುದು ಹೇಗೆಂಬುದನ್ನು ಮಾರ್ಗದರ್ಶನ ನೀಡಿದರು.
ಕ್ರಿಸ್ಟಲ್ ಎಜುಕೇಶನ್ ಸರ್ವೀಸಸ್ ನ ಎಂ ಡಿ ಶ್ರೀ ಮಹೇಂದರ್ ಕುಮಾರ್ ಮಾತನಾಡಿ ವಿವಿಧ ಕೃಷಿ ಸಂಬಂಧಿತ ಅಧ್ಯಯನದ ಬಳಿಕ ಇರುವ ವಿಫುಲ ಉದ್ಯೋಗಾವಕಾಶಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸಂದೇಹಗಳಿಗೆ ಪರಿಹಾರ ಸೂಚಿಸಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್ ಎಲ್, ಗಣಪತಿ ಭಟ್ ಕೆ ಎಸ್  ಮತ್ತು ಅಮೃತ್ ರೈ, ಸಾರ್ವಜನಿಕ ಸಂಪರ್ಕಾಧಿಕಾರಿ ಲಿಶನ್ ಗೌಡ, ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಡಾ. ಆದಮ್ ಶೇಖ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.