Follow us:-
ಗ್ರೀನ್‌ ಸೋಲ್‌ ಹಾಗೂ ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಬೃಹತ್‌ ಪಾದರಕ್ಷೆ ಸಂಗ್ರಹ ಅಭಿಯಾನ
  • By Creative Media Team
  • November 30, 2023
  • No Comments

ಗ್ರೀನ್‌ ಸೋಲ್‌ ಹಾಗೂ ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಬೃಹತ್‌ ಪಾದರಕ್ಷೆ ಸಂಗ್ರಹ ಅಭಿಯಾನ

ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ ಮತ್ತು “ಗ್ರೀನ್‌ ಸೋಲ್”‌ ಸಂಸ್ಥೆಯ ಸಹಕಾರ ಹಾಗೂ ಸಾರ್ವಜನಿಕರಿಂದ ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ ಅದನ್ನು ಉನ್ನತ ತಂತ್ರಜ್ಞಾನದ ಮೂಲಕ ಮರುಬಳಕೆ ಮಾಡಿ ಶಾಲೆಯ ಬಡಮಕ್ಕಳಿಗೆ ಹಂಚುವ ವಿನೂತನ ಮತ್ತು ಮಾದರಿ ಕಾರ್ಯಕ್ರಮ ನವೆಂಬರ್‌ 29 ರಂದು ನಡೆಯಿತು. ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳನ್ನೊಳಗೊಂಡ ಅತ್ಯಂತ ಬಡತನ ಹೊಂದಿದ ಶಾಲೆಯ ಮಕ್ಕಳಿಗೆ ಪಾದರಕ್ಷೆಯನ್ನು ಒದಗಿಸುವ ಅಭಿಯಾನ “ಗ್ರೀನ್‌ ಸೋಲ್”‌ ಎಂಬ ಸಂಸ್ಥೆಯೊಂದಿಗೆ ಸೇರಿ ನಡೆಸಲಾಗುತ್ತಿದೆ. ಅವಿನಾಶ್‌ ಕಾಮತ್‌ ರವರ ಕನಸಿನ ಯೋಜನೆಗೆ ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯೂ ಕೈ ಜೋಡಿಸಿದ್ದು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್‌ ಎಸ್. ಎಲ್‌ ಭಾಗಿಯಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಕನಿಷ್ಟ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದ ವಿದ್ಯಾರ್ಥಿಗಳಿಗೆ ಈ ಯೋಜನೆ ವರದಾನವಾಗಲಿದೆ. “ನಡಿಗೆ” ಯೋಜನೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಕಳ ಪರಿಸರದಿಂದ ಒಂದು ಸಾವಿರಕ್ಕೂ ಅಧಿಕ ಪಾದರಕ್ಷೆಗಳ ಜೊತೆಯನ್ನು “ಗ್ರೀನ್‌ ಸೋಲ್”‌ ಸಂಸ್ಥೆಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *