ಕಾರ್ಕಳದ ಕ್ರಿಯೇಟಿವ್ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್ ಎಜೆನ್ಸಿ ನಡೆಸಿದ ಜೆಇಇ-ಮೈನ್ ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳಾದ ಕು. ದೀಕ್ಷಾ ಪಾಂಡು 95.8311 ಪರ್ಸಂಟೈಲ್, ಸ್ವಸ್ತಿಕ್ ಕೆ ಭಟ್ 91.4659 ಪರ್ಸಂಟೈಲ್, ವರುಣ್ ಜಿ ನಾಯಕ್ 86.1552 ಪರ್ಸಂಟೈಲ್ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತ ದಾಮ್ಲೆ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
ಕ್ರಿಯೇಟಿವ್ ಕಾಲೇಜಿನ ಪ್ರಥಮ ವರ್ಷದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
Good performing.congratulations.
congratulation