Follow us:-
  • By AdminCEF
  • January 25, 2024
  • No Comments

KCET Exam 2023: ಕೆಇಎ’ಯಿಂದ ಮಹತ್ವದ ಪ್ರಕಟಣೆ..ಸಿಇಟಿ ಪರೀಕ್ಷೆ ದಿನದ ಬೆಲ್‌ ಸಮಯ ಬಿಡುಗಡೆ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆ-2023ರ ವೇಳಾಪಟ್ಟಿ ಮತ್ತು ಬೆಲ್‌ ಸಮಯವನ್ನು ಬಿಡುಗಡೆ ಮಾಡಿದೆ. ಮೇ 20 ರಂದು ಮೊದಲ ಪರೀಕ್ಷೆ ನಡೆಯಲ್ಲಿದ್ದು, ಅಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 21 ರಂದು 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.

ಕನ್ನಡ ಭಾಷಾ ಪರೀಕ್ಷೆಯ ಬೆಲ್‌ ಸಮಯ ಮತ್ತು ವಿವರಗಳು

ಮೊದಲನೇ ಬೆಲ್‌ ಬೆಳಗ್ಗೆ 11.10ಕ್ಕೆ – ಈ ಬೆಲ್‌ ಆದ ಮೇಲೆ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಬೇಕು.
ಎರಡನೇ ಬೆಲ್‌ ಬೆಳಗ್ಗೆ 11.20ಕ್ಕೆ – ಈ ಬೆಲ್ ಆದ ಮೇಲೆ ಕೊಠಡಿ ಮೇಲ್ವಿಚಾರಕರು ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ತೋರಿಸಿ ಒಡೆಯಲಾಗುತ್ತದೆ. ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
ಮೂರನೇ ಬೆಲ್‌ 11.30ಕ್ಕೆ – ಈ ಬೆಲ್‌ ಆದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಮತ್ತು ಹೊರ ಹೋಗಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಅವಕಾಶ ನೀಡಲಾಗುತ್ತದೆ.
ನಾಲ್ಕನೇ ಬೆಲ್‌ 12ಕ್ಕೆ – ಇದು ಮೊದಲನೇಯ ಎಚ್ಚರಿಕೆ ಬೆಲ್‌. ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಪರೀಕ್ಷೆಯ ಅರ್ಧಗಂಟೆಯ ಅವಧಿ ಮುಗಿದಿದೆ ಎಂದು ಹೇಳುತ್ತಾರೆ.
ಐದನೇ ಬೆಲ್‌ ಮಧ್ಯಾಹ್ನ 12.25ಕ್ಕೆ– ಇದು ಎರಡನೆಯ ಹಾಗೂ ಕೊನೆಯ ಎಚ್ಚರಿಕೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಐದು ನಿಮಿಷ ಬಾಕಿ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.

ಆರನೆಯ ಬೆಲ್‌ ಹಾಗೂ ಕೊನೆಯ ಬೆಲ್‌ ಮಧ್ಯಾಹ್ನ 12.30ಕ್ಕೆ – ಇದು ಪರೀಕ್ಷೆ ಮುಕ್ತಾಯದ ಬೆಲ್‌. ಕೊಠಡಿಯ ಮೇಲ್ವಿಚಾರಕರು ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಕೆಯನ್ನು ಪಡೆದುಕೊಳ್ಳುವುದು.

ಮೇ 20, 21 ದಿನಾಂಕದ ಬೆಳಗಿನ ಪರೀಕ್ಷೆಯ ಬೆಲ್ ಸಮಯ

ಮೊದಲನೇ ಬೆಲ್‌ ಬೆಳಗ್ಗೆ 10.20ಕ್ಕೆ – ಈ ಬೆಲ್‌ ಆದ ಮೇಲೆ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಬೇಕು.
ಎರಡನೇ ಬೆಲ್‌ ಬೆಳಗ್ಗೆ 10.30ಕ್ಕೆ – ಈ ಬೆಲ್ ಆದ ಮೇಲೆ ಕೊಠಡಿ ಮೇಲ್ವಿಚಾರಕರು ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ತೋರಿಸಿ ಒಡೆಯಲಾಗುತ್ತದೆ. ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
ಮೂರನೇ ಬೆಲ್‌ 10.40ಕ್ಕೆ – ಈ ಬೆಲ್‌ ಆದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಮತ್ತು ಹೊರ ಹೋಗಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಅವಕಾಶ ನೀಡಲಾಗುತ್ತದೆ.
ನಾಲ್ಕನೇ ಬೆಲ್‌ 11.10ಕ್ಕೆ – ಇದು ಮೊದಲನೇಯ ಎಚ್ಚರಿಕೆ ಬೆಲ್‌. ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಪರೀಕ್ಷೆಯ ಅರ್ಧಗಂಟೆಯ ಅವಧಿ ಮುಗಿದಿದೆ ಎಂದು ಹೇಳುತ್ತಾರೆ.
ಐದನೇ ಬೆಲ್‌ 11.30ಕ್ಕೆ – ಇದು ಎರಡನೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಇಪ್ಪತ್ತು ನಿಮಿಷ ಬಾಕಿ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.
ಆರನೆಯ ಬೆಲ್‌ 11.45ಕ್ಕೆ- ಇದು ಕೊನೆಯ ಎಚ್ಚರಿಕೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಐದು ನಿಮಿಷ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.
ಏಳನೇ ಹಾಗೂ ಕೊನೆಯ ಬೆಲ್‌ 11.50ಕ್ಕೆ – ಇದು ಪರೀಕ್ಷೆ ಮುಕ್ತಾಯದ ಬೆಲ್‌. ಕೊಠಡಿಯ ಮೇಲ್ವಿಚಾರಕರು ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಕೆಯನ್ನು ಪಡೆದುಕೊಳ್ಳುವುದು.

ಮೇ 20, 21 ದಿನಾಂಕದ ಮಧ್ಯಾಹ್ನ ಪರೀಕ್ಷೆಯ ಬೆಲ್ ಸಮಯ
ಮೊದಲನೇ ಬೆಲ್‌ ಬೆಳಗ್ಗೆ 2.20ಕ್ಕೆ – ಈ ಬೆಲ್‌ ಆದ ಮೇಲೆ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಬೇಕು.
ಎರಡನೇ ಬೆಲ್‌ ಬೆಳಗ್ಗೆ 2.30ಕ್ಕೆ – ಈ ಬೆಲ್ ಆದ ಮೇಲೆ ಕೊಠಡಿ ಮೇಲ್ವಿಚಾರಕರು ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ತೋರಿಸಿ ಒಡೆಯಲಾಗುತ್ತದೆ. ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
ಮೂರನೇ ಬೆಲ್‌ 2.40ಕ್ಕೆ – ಈ ಬೆಲ್‌ ಆದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಮತ್ತು ಹೊರ ಹೋಗಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಅವಕಾಶ ನೀಡಲಾಗುತ್ತದೆ.
ನಾಲ್ಕನೇ ಬೆಲ್‌ 3.10ಕ್ಕೆ – ಇದು ಮೊದಲನೇಯ ಎಚ್ಚರಿಕೆ ಬೆಲ್‌. ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಪರೀಕ್ಷೆಯ ಅರ್ಧಗಂಟೆಯ ಅವಧಿ ಮುಗಿದಿದೆ ಎಂದು ಹೇಳುತ್ತಾರೆ.
ಐದನೇ ಬೆಲ್‌ 3.30ಕ್ಕೆ – ಇದು ಎರಡನೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಇಪ್ಪತ್ತು ನಿಮಿಷ ಬಾಕಿ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.
ಆರನೆಯ ಬೆಲ್‌ 3.45ಕ್ಕೆ – ಇದು ಕೊನೆಯ ಎಚ್ಚರಿಕೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಐದು ನಿಮಿಷ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.
ಏಳನೇ ಹಾಗೂ ಕೊನೆಯ ಬೆಲ್‌ 3.50ಕ್ಕೆ – ಇದು ಪರೀಕ್ಷೆ ಮುಕ್ತಾಯದ ಬೆಲ್‌. ಕೊಠಡಿಯ ಮೇಲ್ವಿಚಾರಕರು ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಕೆಯನ್ನು ಪಡೆದುಕೊಳ್ಳುವುದು.