Follow us:-
ಕ್ರಿಯೇಟಿವ್‌ ನ ಮೂರು ವಿದ್ಯಾರ್ಥಿಗಳು ಎನ್‌. ಡಿ. ಎ ಗೆ ಆಯ್ಕೆ
  • By Creative Edu Web Admin
  • January 25, 2024
  • No Comments

ಕ್ರಿಯೇಟಿವ್‌ ನ ಮೂರು ವಿದ್ಯಾರ್ಥಿಗಳು ಎನ್‌. ಡಿ. ಎ ಗೆ ಆಯ್ಕೆ

ಕ್ರಿಯೇಟಿವ್‌ ಕಾರ್ಕಳ ಕೇಂದ್ರ ಲೋಕಸೇವಾ ಆಯೋಗ (UPSC) ಎಪ್ರಿಲ್‌ 16, 2023 ರಲ್ಲಿ ನಡೆಸಿದ  ಅತ್ಯಂತ ಕಠಿಣಕರವಾದ ರಾಷ್ಟ್ರಮಟ್ಟದ ಎನ್‌.ಡಿ.ಎ/ಎನ್‌.ಎ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ 03 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪುಣೆಯ ಖಡಕ್‌ವಾಸ್ಲದಲ್ಲಿರುವ NDA ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್‌ ಅಥವಾ ಬಿ.ಎಸ್‌.ಸಿ ಪದವಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆಗೆ ದೇಶದಾದ್ಯಂತ ಸುಮಾರು 2.24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7,964 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ ಎಸ್‌.ಎಸ್‌.ಬಿ (ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್)‌ ಸುತ್ತಿಗೆ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ರಾಮಕುಮಾರ್‌ ಬಾಬು ಬರ್ಗಿ, ಜಾಗೃತಿ ಕೆ.ಪಿ, ಪ್ರಣವ್‌ ಪಿ ಸಂಜಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯವರು ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು, 900 ಅಂಕಗಳಿಗೆ ನಡೆಯುವ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗೆ ಇರುವ ದೊಡ್ಡ ಸವಾಲು. ಕ್ರಿಯೇಟಿವ್‌ ಸಂಸ್ಥೆಯಲ್ಲಿ ಇದಕ್ಕಾಗಿ ನಡೆದ ವಿಶೇಷ ಬೋಧನೆ ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣವಾಗಿದೆ.

ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯವರು, ಉಪನ್ಯಾಸಕ ವರ್ಗ, NDA ಸಂಯೋಜಕರಾದ ಸುಮಂತ್‌ ದಾಮ್ಲೆ, ರಕ್ಷಿತ್  ಅಭಿನಂದಿಸಿ, ಶುಭ ಹಾರೈಸಿದ್ದಾರೆ.