Follow us:-
ಯು.ಪಿ.ಎಸ್. ಸಿ -ಎನ್. ಡಿ. ಎ. ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ಕಾಲೇಜು ವಿದ್ಯಾರ್ಥಿ ಪ್ರಣವ್ ಪಿ ಸಂಜೀ ಸಾಧನೆ
  • By Creative Edu Web Admin
  • January 25, 2024
  • No Comments

ಯು.ಪಿ.ಎಸ್. ಸಿ -ಎನ್. ಡಿ. ಎ. ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ಕಾಲೇಜು ವಿದ್ಯಾರ್ಥಿ ಪ್ರಣವ್ ಪಿ ಸಂಜೀ ಸಾಧನೆ

ಹಾಸನ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ (ರಿ), ಶೈಕ್ಷಣಿಕ ಸಹಭಾಗಿತ್ವದ ಹೆಚ್.ಕೆ.ಎಸ್ ಪದವಿಪೂರ್ವ ಕಾಲೇಜು ,ಇಲ್ಲಿನ ವಿದ್ಯಾರ್ಥಿಯಾದ ಪ್ರಣವ್ ಪಿ ಸಂಜೀ ಈ ಬಾರಿಯ ಎನ್. ಡಿ. ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅಂತಿಮ ಸಂದರ್ಶನ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಯು. ಪಿ. ಎಸ್. ಸಿ ಯವರು ನಡೆಸುವ 900 ಅಂಕಗಳ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು ಎರಡು ಲಕ್ಷಕ್ಕೂ ಮಿಗಿಲಾದ ವಿದ್ಯಾರ್ಥಿಗಳು ಪ್ರತೀ ವರ್ಷವೂ ಪರೀಕ್ಷೆಯನ್ನು ಎದುರಿಸುತ್ತಾರೆ. ಈ ವರ್ಷ ಕೇವಲ 395 ಸೀಟುಗಳಿಗೆ ಸೀಮಿತವಿರುವ, ದೇಶಾದ್ಯಂತ ನಡೆಯುವ ಕಠಿಣ ಪರೀಕ್ಷೆಯಲ್ಲಿ ಎಸ್. ಎಸ್. ಬಿ ಅಂತಿಮ ಸಂದರ್ಶನ ಸುತ್ತಿಗೆ ಅರ್ಹತೆಯನ್ನು ಪಡೆದಿರುವುದು ಕಾಲೇಜಿಗೆ ಮಾತ್ರವಲ್ಲದೆ ಜಿಲ್ಲೆಗೂ ಹೆಮ್ಮೆಯ ವಿಷಯ.

ಈ ವಿಶೇಷ ಸಾಧನೆಗೈದ ವಿದ್ಯಾರ್ಥಿಯನ್ನು  ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯುತ ಹೆಚ್. ಕೆ. ಸುರೇಶ್ , ಆಡಳಿತ ಮಂಡಳಿ, ಪ್ರಾಂಶುಪಾಲರು,  , ಹಾಗೂ ಉಪನ್ಯಾಸಕ ವೃಂದದವರು ಮತ್ತು ಎನ್. ಡಿ. ಎ ಸಂಯೋಜಕರಾದ ಶ್ರೀ ರಕ್ಷಿತ್ ಬಿ. ಎಸ್ ಅಭಿನಂದಿಸಿದ್ದಾರೆ.