Follow us:-
RIE CEE – 2023 ಹೆಚ್. ಕೆ. ಎಸ್’ನ  ಸುಪ್ರಸಿದ್ಧ್ ಕಾಂತ್ ರಾಜ್ಯಕ್ಕೆ ಪ್ರಥಮ.
  • By Creative Edu Web Admin
  • January 24, 2024
  • No Comments

RIE CEE – 2023 ಹೆಚ್. ಕೆ. ಎಸ್’ನ ಸುಪ್ರಸಿದ್ಧ್ ಕಾಂತ್ ರಾಜ್ಯಕ್ಕೆ ಪ್ರಥಮ.

ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ವಿದ್ಯಾರ್ಥಿಗಳಿಗೆ ಜುಲೈ 2 ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್’ನ ಅಡಿಯಲ್ಲಿ ತರಬೇತಿಯನ್ನು ಪಡೆದು ಪ್ರಥಮ ಪ್ರಯತ್ನದಲ್ಲೇ ಅದ್ಭುತ ಸಾಧನೆ ಗೈದಿದ್ದಾರೆ .
ರಾಷ್ಟ್ರಾದ್ಯಂತ ಕೇವಲ ಐದು ಶಿಕ್ಷಣ ಸಂಸ್ಥೆಯನ್ನು ಹೊಂದಿರುವ RIE ( Regional Institute of Education) ನಡೆಸುವ ರಾಷ್ಟ್ರಮಟ್ಟದ ಎನ್. ಸಿ. ಇ . ಆರ್.ಟಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್’ನ ಮೂವರು ವಿದ್ಯಾರ್ಥಿಗಳು ಅದ್ಬುತ ಫಲಿತಾಂಶದೊಂದಿಗೆ ಪ್ರವೇಶ ಪಡೆದಿದ್ದಾರೆ.
ತಮ್ಮ ಮೊದಲ ಪ್ರಯತ್ನದಲ್ಲೇ ವಿದ್ಯಾರ್ಥಿಗಳಾದ ಸುಪ್ರಸಿದ್ಧ್ ಕಾಂತ್ (cat. ರ‍್ಯಾಂಕ್ 1, ಸಾಮಾನ್ಯ ರ‍್ಯಾಂಕ್ 2 ) , ನಿಹಾರಿಕ ಎಂ.ವಿ (6 ನೇ ರ‍್ಯಾಂಕ್), ಸುಭಾಷ್ ಪೈ (12 ನೇ ರ‍್ಯಾಂಕ್) ದೇಶಮಟ್ಟದಲ್ಲಿ ರ‍್ಯಾಂಕ್ ಪಡೆದಿದ್ದು ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಕೆ.ಸುರೇಶ್ ,ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ,ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ಮಹೇಶ್ ಕುಮಾರ್ ಸಿ. ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.