ಮಲ್ನಾಡ್ ಇಕೋ ಕ್ಲಬ್ ನ ವನ್ಯ ಚೈತನ್ಯ 2024ರ ಸ್ಪರ್ಧೆಗಳಲ್ಲಿ ಹೆಚ್ ಕೆ ಎಸ್ ವಿದ್ಯಾರ್ಥಿಗಳ ಅದ್ಬುತ ಸಾಧನೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜು ಹಾಸನ. ದಿನಾಂಕ:23.11.2024ನೇ ಶನಿವಾರ ಹಾಸನದ ಮಲ್ನಾಡ್ ಇಂಜಿನಿಯರ್ ಕಾಲೇಜು, ಮಲ್ನಾಡ್ ಇಕೋ ಕ್ಲಬ್ ಮತ್ತು ಅರಬಿಂದೋ ಮಹೇಶ್ ಪಿಯು ಕಾಲೇಜು ಇವರ ಸಹಯೋಗದಲ್ಲಿ ವನ್ಯ ಚೈತನ್ಯ 2024ರ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಯಶವಂತ್ ತಂಡ ಬೀದಿ ನಾಟಕ ಪ್ರಥಮ, ಕುವರ್ ತಂಡ ರಂಗಭೂಮಿ ಪ್ರಥಮ, ಯಶವಂತ್ ತಂಡ ಮ್ಯಾಡ್ ಆಡ್ ಪ್ರಥಮ, ಮಂಜುನಾಥ್ ತಂಡ ಬೆಸ್ಟ್ ಔಟ್ ಆಫ್ ವೆಸ್ಟ್ ಪ್ರಥಮ, ಅನನ್ಯ ರಾಜೇಶ್ ಮತ್ತು ನೀತು ಕ್ಲೇ ಮಾಡಲಿಂಗ್ ಪ್ರಥಮ, ಸಮನ್ವಿ ಎಚ್ ಆರ್ ಚಿತ್ರಕಲೆ ಪ್ರಥಮ, ತ್ರಿಶಾ ಎಚ್ ಎಸ್ ಸೋಲೋ ಡಾನ್ಸ್ ಪ್ರಥಮ, ಸೌಂದರ್ಯ ತಂಡ ಸಮೂಹ ಗೀತ ಗಾಯನ ಪ್ರಥಮ, ವಿನೀತ್ ಸೇನ್ ಫೋಟೋಗ್ರಾಫಿ ಪ್ರಥಮ, ಸುಹಾಸ್ ಮತ್ತು ರೋಹನ್ ಪವನ್ ರೆಡ್ಡಿ ರಸಪ್ರಶ್ನೆ ದ್ವಿತೀಯ, ಶರ್ವಾಣಿ ಚಿತ್ರಕಲೆ ದ್ವಿತೀಯ, ಅಬೂಬಕ್ಕರ್ ದಯಾನ್ ಮತ್ತು ಮೋನಿತ್ ಫೇಸ್ ಪೇಂಟಿಂಗ್ ದ್ವಿತೀಯ, ಗೌತಮ್ ಆಶುಭಾಷಣ ದ್ವಿತೀಯ, ತ್ರಿಶಾ ತಂಡ ಸಮೂಹ ನೃತ್ಯ ದ್ವಿತೀಯ, ನೂತನ ತಂಡ ಫ್ಯಾಶನ್ ಶೋ ದ್ವಿತೀಯ, ನೇಹಾ ಫಾತಿಮಾ ಮತ್ತು ನೇಹ ಎಚ್ಎಲ್ ಕುಕ್ಕಿಂಗ್ ವಿಥೌಟ್ ಫೈರ್ ದ್ವಿತೀಯ, ಕೀರ್ತನ್ ಫೋಟೋಗ್ರಫಿ ದ್ವಿತೀಯ, ಪಾವನ ಆರ್ ಪ್ರಬಂಧ ಸ್ಪರ್ಧೆ ತೃತೀಯ, ನಿಸರ್ಗ ಮತ್ತು ಸಾನಿಕ ಕ್ಲೇ ಮಾಡಲಿಂಗ್ ತೃತೀಯ, ಗೌತಮ್ ಚರ್ಚಾ ಸ್ಪರ್ಧೆ ತೃತೀಯ, ದಿಲೀಪ್ ಫೋಟೋಗ್ರಾಫಿ ತೃತೀಯ, ರೇಷ್ಮಾ ಜಿಕೆ ಮಾಕ್ ಇಂಟರ್ವ್ಯೂ ತೃತೀಯ, ಧನ್ಯಶ್ರೀ ಸೋಲೋ ಸಿಂಗಿಂಗ್ ತೃತೀಯ ಬಹುಮಾನವನ್ನು ಪಡೆದು ಸಮಗ್ರ ಪ್ರಶಸ್ತಿ ಚಾಂಪಿಯನ್ ಶಿಪ್ ಪಡೆದು ಅದ್ಭುತ ಸಾಧನೆಗೈದಿದ್ದಾರೆ.
ವಿಜೇತರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ. ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಸಂಯೋಜಕರಾದ ಅಶ್ವಿನಿ ಸಿ ಎಲ್ ಪ್ರಾಂಶುಪಾಲರು ಹಾಗೂ ಎಲ್ಲಾ
ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.