ಹೆಚ್ ಕೆ ಎಸ್ ಪಿಯು ಕಾಲೇಜಿನಲ್ಲಿ ಕ್ರಿಯೇಟಿವ್ ಉನ್ನತಿ ಕಾರ್ಯಗಾರ.
ದಿನಾಂಕ :20/10/2024. ಭಾನುವಾರದಂದು
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದೊಂದಿಗೆ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜು ಹಾಸನ ಇಲ್ಲಿ ಶಿಕ್ಷಕರ ಸಂವಹನ ಮತ್ತು ‘ಕ್ರಿಯೇಟಿವ್ ಉನ್ನತಿ ‘ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮತ್ತು ನಿರ್ವಹಣ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ತರಬೇತಿ ಮುಖ್ಯಸ್ಥರಾದ ಡಾ. ಸಿ ಕೆ ಮಂಜುನಾಥ್ ಅವರು” ಶಿಕ್ಷಕ ವೃತ್ತಿ ಪ್ರಪಂಚದ ಅತ್ಯಂತ ಶ್ರೇಷ್ಠ ವೃತ್ತಿ, ಪ್ರಪಂಚದಲ್ಲಿ ಎಲ್ಲರೂ ಗೌರವಿಸುವ ವೃತ್ತಿ, ಶಿಕ್ಷಕರು ಪಾಠ ಪ್ರವಚನವಷ್ಟೇ ಅಲ್ಲದೆ ಜೀವನದ ನೈತಿಕ ಮೌಲ್ಯಗಳನ್ನು ಬೋಧಿಸುವ ವೃತ್ತಿಯಾಗಿದೆ.” ಎಂದು ಶಿಕ್ಷಕ ವೃತ್ತಿಯ ಮಹತ್ವದ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತುಗಳನ್ನಾಡಿದರು . ಉಪ ಪ್ರಾಂಶುಪಾಲರಾದ ಆದಿತ್ಯ ವಟಿ ಕೆ. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವ್ಯವಹಾರ ಅಧ್ಯಯನ ಶಾಸ್ತ್ರದ ಉಪನ್ಯಾಸಕರಾದ ಕೃಷ್ಣ ಪ್ರಕಾಶ್ ಪಿ ಸ್ವಾಗತಿಸಿ, ಆಂಗ್ಲ ಭಾಷಾ ಉಪನ್ಯಾಸಕರಾದ ವಿಕಾಸ್ ನಿರೂಪಿಸಿ, ಲೆಕ್ಕಶಾಸ್ತ್ರ ಉಪನ್ಯಾಸಕಿಯಾದ ಅಶ್ವಿನಿ ಸಿ ಎಲ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ವರ್ಗದವರು ಪಾಲ್ಗೊಂಡಿದ್ದರು.