ಎನ್. ಡಿ. ಎ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ನ ಚೇತನ್ ಗೌಡ ಎನ್. ಎಸ್ ಅದ್ಭುತ ಸಾಧನೆ.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ಸೆಪ್ಟೆಂಬರ್ 01 ರಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಯು ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನ ಅಡಿಯಲ್ಲಿ ತರಬೇತಿಯನ್ನು ಪಡೆದು ಪ್ರಥಮ ಪ್ರಯತ್ನದಲ್ಲೇ ಈ ಅದ್ಭುತ ಸಾಧನೆ ಗೈದಿದ್ದಾರೆ
ತಮ್ಮ ಮೊದಲ ಪ್ರಯತ್ನದಲ್ಲೇ ಕೇಂದ್ರ ಲೋಕಸೇವಾ ಆಯೋಗ ಅವರು ನಡೆಸಿದ ಎರಡನೇ ಹಂತದ ಲಿಖಿತ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಯಾದ ಚೇತನ್ ಗೌಡ ಎನ್ ಎಸ್ ಅವರು ಸರ್ವಿಸ್ ಸೆಲೆಕ್ಷನ್ ಬೋರ್ಡ್ ನಡೆಸುವ ಸಂದರ್ಶನಕ್ಕೆ ಹಾಸನ ಜಿಲ್ಲೆಯಿಂದ ಆಯ್ಕೆಗೊಂಡು ಅದ್ಭುತ ಸಾಧನೆಗೈದಿದ್ದಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ರಕ್ಷಿತ್ ಬಿ. ಎಸ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.