- By Creative Edu Web Admin
- January 24, 2024
- No Comments
ಸಂಸ್ಕೃತಾಭ್ಯಾಸದಿಂದ ಸಂಸ್ಕೃತಿಯ ಪುನರುತ್ಥಾನ ಸಾಧ್ಯ: ವಿದ್ವಾನ್ ಗಣಪತಿ ಭಟ್
ದಿನಾಂಕ 31/08/2023 : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದೊಂದಿಗೆ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜ್ ಹಾಸನ ಇಲ್ಲಿ ವಿಶ್ವ ಸಂಸ್ಕೃತ ದಿನದ ಪ್ರಯುಕ್ತ ‘ರಾಜಸೂಯ- 2023’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಸಹ ಸಂಸ್ಥಾಪಕರು ಮತ್ತು ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಪ್ರಾಂಶುಪಾಲರಾಗಿರುವ ವಿದ್ವಾನ್ ಗಣಪತಿ ಭಟ್ ರವರು ಮಾತನಾಡುತ್ತಾ ಆಧುನಿಕ ಜಗತ್ತಿನಲ್ಲಿ ವೇದಾಧ್ಯಯನದ ಅನಿವಾರ್ಯತೆಯನ್ನು ತಿಳಿಹೇಳಿದರು. ಸಂಸ್ಕೃತಾಭ್ಯಾಸದಿಂದ ಸಂಸ್ಕೃತಿಯ ಪುನರುತ್ಥಾನ ಸಾಧ್ಯ ಎಂದು ಅಭಿಪ್ರಾಯ ಪಟ್ಟ ಅವರು ಸಂಸ್ಕೃತ ದಿನದ ಮಹತ್ವವನ್ನು ವಿವರಿಸುತ್ತಾ ಪ್ರಾಚೀನ ಭಾರತದ ಸಾಹಿತ್ಯ ಮತ್ತು ವಿಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು . ಮತ್ತೋರ್ವ ಅತಿಥಿಯಾಗಿ ಆಗಮಿಸಿದ ಅರ್ಥಶಾಸ್ತ್ರ ಉಪನ್ಯಾಸಕರಾದ ಮಹೇಶ್ ಕೆ. ಎನ್ ರವರು ದೈನಂದಿನ ಜೀವನದಲ್ಲಿ ಸಂಸ್ಕೃತವನ್ನು ಅಳವಡಿಸುವಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ವಿಜ್ಞಾನ ಎಂಬ ವಿಷಯದ ಕುರಿತು ಚರ್ಚಾಘೋಷ್ಠಿ ನಡೆಯಿತು. ಕಳೆದಬಾರಿಯ ಪ್ರಥಮ ಪಿ.ಯು.ಸಿ ವಾರ್ಷಿಕ ಸಂಸ್ಕೃತ ಪರೀಕ್ಷೆಯಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು ವಿಶ್ವ ಸಂಸ್ಕೃತ ದಿನದ ಅಂಗವಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಹೆಚ್.ಕೆ.ಎಸ್ ಪಿ ಯು ಕಾಲೇಜ್ ಹಾಸನ ಇಲ್ಲಿನ ಉಪಪ್ರಾಂಶುಪಾಲರುಗಳಾದ ಶ್ರೀ ಪ್ರವೀಣ್ ಎ. ಮತ್ತು ಆದಿತ್ಯ ವಟಿ. ಕೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಗಾಂವ್ಕರ್ ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ವಿಘ್ನೇಶ್ ಕಾಮತ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾಲೇಜು ವಿದ್ಯಾರ್ಥಿನಿಯರಾದ ಇಂಚರ ಪಟೇಲ್ ಸ್ವಾಗತಿಸಿದರೆ, ಸಿರಿಷಾ ಶಾಸ್ತ್ರಿ ವಂದನಾರ್ಪಣೆಗೈದರು. ಸಮಾರಂಭದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥನಿಯರು ಪಾಲ್ಗೊಂಡಿದ್ದರು.