ಜೆ.ಇ.ಇ ಮೈನ್ ಫಲಿತಾಂಶದಲ್ಲಿ ಗುರುತರ ಹೆಜ್ಜೆ ಮೂಡಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ
ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) 2025 ಅರ್ಹತಾ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್.ಎಸ್ 99.4676491, ಸಾನಿಕ ಕೆ.ಎನ್ 99. 2028725, ಎಂ. ಮಂಜುನಾಥ್ 99.0174525, ಮೋಹಿತ್ ಎಂ 99.1632262, ಭೌತ ಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಪಡೆಯುವುದರ ಮೂಲಕ ಹೆಚ್ ಎ ರಾಜೇಶ್ ಒಟ್ಟು 99.10554485 ಪರ್ಸೆಂಟೈಲ್ ಪಡೆದು ಅಪ್ರತಿಮ ಸಾಧನೆ ಗೈದಿದ್ದಾರೆ.
99 ಪರ್ಸೆಂಟೈಲ್ ಗಿಂತ ಅಧಿಕ 5 ವಿದ್ಯಾರ್ಥಿಗಳು, 98ಕ್ಕಿಂತ ಅಧಿಕ 14, 95ಕ್ಕಿಂತ ಅಧಿಕ 49, 90 ಪರ್ಸೆಂಟೈಲ್ ಗಿಂತ ಮೇಲ್ಪಟ್ಟು 111 ವಿದ್ಯಾರ್ಥಿಗಳು ಗುರುತರ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ. ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆ.ಇ.ಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ ಮತ್ತು ವಿನಯ ಕುಮಾರ್‌ರವರು ಅಭಿನಂದನೆ ಸಲ್ಲಿಸಿದ್ದಾರೆ.