ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ C.A ಮತ್ತು C.S.E.E.T ಮಾಹಿತಿ ಕಾರ್ಯಗಾರ
ದಿನಾಂಕ 26-06-2025 ಮತ್ತು 27-06-2025 ರಂದು ಕ್ರಿಯೇಟಿವ್ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ C.A ಮತ್ತು C.S.E.E.T ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
C.A ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ CA ಮಹೇಂದ್ರ ಶೆಣೈ ಪಿ. ರವರು ಮಾತನಾಡಿ CA ಆಗುವ ಮೂಲಕ ವೃತ್ತಿಪರ ಭದ್ರತೆ ಸಿಗುತ್ತದೆ. ಈ ಕ್ಷೇತ್ರದಲ್ಲಿ ನಿರಂತರ ಬೇಡಿಕೆ ಇದೆ. ವಾಣಿಜ್ಯ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಲು ಸಿ ಎ ಫೌಂಡೇಶನ್ ಕೋರ್ಸ್ ಒಂದು ಶಕ್ತಿಶಾಲಿ ಮೆಟ್ಟಿಲು ಎಂದು ಹೇಳಿದರು.
ಸಿ ಎಸ್ ಇ ಇ ಟಿ ಮಾಹಿತಿ ಕಾರ್ಯಗಾರಕ್ಕೆ ಆಗಮಿಸಿದ ಮುಖ್ಯ ಅತಿಥಿ ವಿ ರೀಚ್ ಅಕಾಡೆಮಿಯ ಸಂಸ್ಥಾಪಕರಾದ CS ಸಂತೋಷ್ ಪ್ರಭುರವರು ಮಾತನಾಡಿ ಕಂಪೆನಿ ಸೆಕ್ರೆಟರಿ ಕೋರ್ಸ್ ಎಂಬುದು ಪಿ.ಯು.ಸಿ ನಂತರ ವಿದ್ಯಾರ್ಥಿಗಳಿಗೆ ಭದ್ರ ಭವಿಷ್ಯದ ದಾರಿ. ಇದು ಕಾನೂನು, ಆಡಳಿತ ಹಾಗೂ ವೃತ್ತಿಪರ ಜ್ಞಾನವನ್ನು ಒದಗಿಸಿ, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನೆರವಾಗುತ್ತವೆ. CS ವೃತ್ತಿ ಸಮಾಜದಲ್ಲಿ ಗೌರವಪೂರ್ಣ ಸ್ಥಾನವನ್ನು ಒದಗಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಹಾಗೂ ಗಣಪತಿ ಭಟ್ ಕೆ.ಎಸ್ ರವರು ವಿದ್ಯಾರ್ಥಿಗಳಿಗೆ ಕೋರ್ಸ್ ನ ಮಹತ್ವವನ್ನು ತಿಳಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ CA ನಾಗೇಶ್ ಪ್ರಭು, ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.