ಜೆ.ಇ.ಇ (Mains) 2025- ಹಾಸನ ಜಿಲ್ಲೆಗೆ ಹೆಚ್ ಕೆ ಎಸ್ ಕಾಲೇಜು ನಂ.1
ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಎನ್.ಐ.ಟಿ, ಐ ಐ ಐ ಟಿ, ಸಿ.ಎಫ್.ಟಿ.ಐ ಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಜನವರಿ 22 ರಿಂದ 29 ರ ವರೆಗೆ ನಡೆದ ಜೆ.ಇ.ಇ (Mains) ಸೆಶನ್ 1 ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್.ಕೆ.ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ಅದ್ಭುತ ಸಾಧನೆ ಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿಯಾದ ಚೇತನ್ ಗೌಡ ಎನ್ ಎಸ್ 99.4676491(ಭೌತಶಾಸ್ತ್ರ99.5671, ರಸಾಯನಶಾಸ್ತ್ರ 97.9087, ಗಣಿತಶಾಸ್ತ್ರ99.2376 ) ಪರ್ಸೆಂಟೆೈಲ್ ಪಡೆದು ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ.
ಭೌತ ಶಾಸ್ತ್ರದಲ್ಲಿ 100, ರಸಾಯನ ಶಾಸ್ತ್ರ 99.9714 ಪಡೆಯುವುದರ ಮೂಲಕ ಹೆಚ್ ಎ ರಾಜೇಶ್ ಒಟ್ಟು 99.10554485 ಪರ್ಸೆಂಟೈಲ್ ಪಡೆದು ಅಪ್ರತಿಮ ಸಾಧನೆ ಗೈದಿದ್ದಾರೆ. ಉಳಿದಂತೆ ಗಣೇಶ್ ಜಿ 98.312243, ಸಂಗೀತ ಬಿ ಎಂ 97.7550628, ಹೇಮಂತ್ ಕುಮಾರ್ 97.3622675, ಶ್ರೀನಿಧಿ ಡಿ 96.6964046, ಪ್ರೇಕ್ಷಾ ಸಿ ಜೆ 96.6773577, ಗೌತಮ್ ಸಿ ವೈ 93.5379297,ಬಿಂದು ಎಂ ವೈ 93.4126461, ಆಕಾಶ್ ಕೆ ದೇವಾಂಗ 93.1078423, ಪ್ರೀತಿ ಸಿ ಎಲ್ 92.6258248, ಮೋನಿಷಾ ಡಿ 92.5908538, ತ್ರಿಶ್ಲಾ ಗಾಂಧಿ 92.4118231, ಕೀರ್ತನಾ ಬಿ 92.1683623, ಬಿ ಆರ್ ಕಿಶನ್ ಗೌಡ 92.1567847 ಪರ್ಸೆಂಟೈಲ್ ಪಡೆಯುವುದರ ಜೊತೆಗೆ ಇನ್ನು ಹಲವು ವಿದ್ಯಾರ್ಥಿಗಳು ಮುಂದಿನ ಹಂತದ ಜೆ. ಇ. ಇ ಅಡ್ವಾನ್ಸ್ಡ್ (JEE Advanced) ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದು ಶಿಕ್ಷಣ ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಪ್ರತಿ ವರ್ಷವೂ ದೇಶದ ಪ್ರತಿಷ್ಟಿತ ತಾಂತ್ರಿಕ ಸಂಸ್ಥೆಗಳಾದ ಐಐಟಿ (IIT), ಎನ್ ಐ ಟಿ (NIT), ಐ ಐ ಐ ಟಿ (IIIT), ಸಿ ಎಫ್ ಟಿ ಐ (CFTI) ಗಳಲ್ಲಿ ಹೆಚ್ ಕೆ ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ಆದಿತ್ಯ ವಟಿ ಕೆ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.