ಕ್ರಿಯೇಟಿವ್ ಕಾಲೇಜಿನಲ್ಲಿ ಡಿಟೆಕ್ಟಿವ್ ದಿವಾಕರ್ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭ
ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿಬರುತ್ತದೆ ಅದೇ ಡಿಟೆಕ್ಟಿವ್ ದಿವಾಕರ್.
ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ದಿನಾಂಕ: 28- 03- 2026 ಶನಿವಾರ ನೆರವೇರಿತು.
ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾಕ್ಟರ್ ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಶ್ರೀ ಅಶ್ವತ್ ಎಸ್.ಎಲ್ .ರವರು “ಈ ಚಲನಚಿತ್ರವು ಒಂದು ಹೊಸ ಕಥಾಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ, ರಹಸ್ಯಗಳನ್ನು ಅನಾವರಣಗೊಳಿಸುವ ಈ ಕಥೆ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದೆ”. ಎಂದು ತಿಳಿಸುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ, ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್ .ಎಲ್., ಶ್ರೀ ಅಮೃತ್ ಯು .ರೈ ಎನ್.ಪಿ . ಮೀಡಿಯಾದ ಮುಖ್ಯಸ್ಥರಾದ ಶ್ರೀ ವಾಸುದೇವ ಭಟ್, ಸಂದೀಪ್ ಎನ್, ಶ್ರೀ ಅವಿನಾಶ್ ಶೆಟ್ಟಿ (ಅಮ್ಮ ಚಾರಿಟೇಬಲ್ ಟ್ರಸ್ಟ್), ರಮಾನಂದ (ನಿರ್ದೇಶಕರು) ಡಾಕ್ಟರ್ ಸಂತೋಷ್ ಕುಮಾರ್ ಶೆಟ್ಟಿ, ಸುನೀಲ್ ಕಡ್ತಲ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಲೋಹಿತ್ ನಡೆಸಿಕೊಟ್ಟರು.
ಚಿತ್ರತಂಡದ ಪರಿಚಯ
ನಿರ್ಮಾಪಕರು : ಶ್ರೀ ಅಮೃತ್ ಯು. ರೈ. ಮತ್ತು ಸುನೀಲ್ ಶೆಟ್ಟಿ
ಸಹ ನಿರ್ಮಾಣ : ವಿಭಾ ಪ್ರೊಡಕ್ಷನ್
ಕಥೆ ಮತ್ತು ನಿರ್ದೇಶನ : ಸುನೀಲ್ ಕಡ್ತಲ
ಸಹಾಯಕ ನಿರ್ದೇಶಕರು: ವಿನೀಷ ಪೂಜಾರಿ, ಸಾಯಿನಾಥ್ ಪೆರ್ಡೂರು
ಛಾಯಾಗ್ರಹಣ : ಸಂತೋಷ್ ಕುಲಾಲ್
ಸಂಗೀತ : ಕಾರ್ತಿಕ್ ಮುಲ್ಕಿ, ಪ್ರವೀಣ್
ಸಂಕಲನ : ಗಗನ್ ಡಿ, ಪ್ರವೀಣ್ ಜಾರ್ಕಾಳ, ಪ್ರಜ್ವಲಿ ಸುವರ್ಣ
ವಸ್ತ್ರಲಂಕಾರ : ದರ್ಶಿತ್ ಭಂಡಾರಿ
ಪಬ್ಲಿಸಿಟಿ ಡಿಸೈನ್ : ಇನ್ಸ್ಪೈರ್ ಕ್ರಿಯೇಶನ್.