ಮತದಾನದ ಅರಿವು ಜಾಗ್ರತಿ ಕಾರ್ಯಕ್ರಮ
ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು ನಾವು ನಮ್ಮನ್ನು ಅಳುವವರನ್ನು ಆಯ್ಕೆ ಮಾಡುವ ಅಧಿಕಾರ ಜನಸಾಮಾನ್ಯನಿಗಿದೆ. ಮತದಾರ ತನ್ನ ಮತವನ್ನು ಹಣಕ್ಕಾಗಿ ಮಾರಿಕೊಳ್ಳದೆ ಮತವನ್ನು ಸರಿಯಾದ ವ್ಯಕ್ತಿಗೆ ಚಲಾಯಿಸಬೇಕು ಮತ್ತು ಒಂದೊಂದು ಮತವೂ ಅತ್ಯಮೂಲ್ಯವಾದುದು. ಮತದಾರರ ಗುರುತಿನ ಚೀಟಿಯು ಒಬ್ಬ ವ್ಯಕ್ತಿಯ ಅಧಿಕೃತ ಗುರುತಿಗಾಗಿ ಬಳಸಬಹುದು. ಮತ್ತು ದೇಶದ ಯಾವುದೇ ಮೂಲೆಯಲ್ಲಿಯಾದರೂ ತಾನು ಭಾರತೀಯ ನಾಗರೀಕ ಎಂಬುವುದನ್ನು ಸಾಭೀತು ಪಡಿಸುವ ಸಾಕ್ಷಿಯಾಗಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳೇ ನಾಳಿನ ಭವಿಷ್ಯ ಎಂಬುವುದನ್ನು ಮನಗಂಡು ದೇಶದ ಜವಾಬ್ಧಾರಿಯುತ ಪ್ರಜೆಯಾಗಬೇಕಾದರೆ ಯಾವ ಆಮಿಷಗಳಿಗೂ ಬಲಿಯಾಗದೇ ವಿದ್ಯಾವಂತರಾದ ಯುವ ಜನರು ತಮ್ಮ ಮತವನ್ನು ಜವಬ್ಧಾರಿಯಿಂದ ಚಲಾಯಿಸಿದಾಗ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಕ್ರಿಯೇಟಿವ್ ಪ. ಪೂ. ಕಾಲೇಜಿನ ಸಂಸ್ಥಾಪಕ ಶ್ರೀ ಗಣಪತಿ ಭಟ್ ಕೆ. ಎಸ್ ನುಡಿದರು.
ಅವರು ಮತದಾನದ ಅರಿವು – ಜಾಗ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ಫಲಕವನ್ನು ಪ್ರದರ್ಶಿಸಿದರು. ಉಪನ್ಯಾಸಕರಾದ ಉಮೇಶ್, ಚಂದ್ರಕಾಂತ ಆಚಾರ್ಯ ಉಪಸ್ಥಿತರಿದ್ದರು. ಉಮೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.