ಕ್ರಿಯೇಟಿವ್ ಕಾಲೇಜಿನಲ್ಲಿ ವಿಶ್ವ ಹೃದಯ ದಿನಾಚರಣೆ
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯಕ್ಕಾಗಿ ವಿಶ್ವ ಹೃದಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯವಂತ ಹೃದಯವಿರಬೇಕಾದರೆ ನಿಯಮಿತವಾದ ವ್ಯಾಯಾಮ, ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಜಗತ್ತಿನ ಎಲ್ಲರೂ ವಿಶ್ವ ಹೃದಯ ದಿನವನ್ನು ಹೃದ್ರೋಗಿಗಳೇ ಇಲ್ಲವಾಗಿಸುವ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಸೈನ್ಸ್ ಕ್ಲಬ್‌ನ ಮುಖ್ಯಸ್ಥ ಲೋಹಿತ್ ಎಸ್ ಕೆ ಸುಂದರ ಮತ್ತು ಸ್ವಸ್ಥಮನಸ್ಸುಗಳ ಮೂಲಕ ಎಲ್ಲರೂ ಹೃದಯವಂತರಾಗಿ, ಆರೋಗ್ಯವಂತರಾಗಲಿ ಎಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಹೃದಯ ಸಂಬಂಧಿ ಘೋಷಣೆಗಳು ನೆರವೇರಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ಶ್ರೀ ಗಣಪತಿ ಭಟ್ ಕೆ ಎಸ್, ಆದರ್ಶ ಎಂ ಕೆ ಅಮೃತ್ ರೈ ಉಪನ್ಯಾಸಕರಾದ ಉಮೇಶ್, ರಾಘವೇಂದ್ರ ರಾವ್, ರಾಜೇಶ್ ಶೆಟ್ಟಿ, ಡಾ. ಆದಂ ಶೇಕ್, ಅಕ್ಷತಾ ಜೈನ್, ಸುನಿಲ್, ಹರೀಶ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.