Follow us:-
Students Orientation Programme
  • By Creative Edu Web Admin
  • January 24, 2024
  • No Comments

Students Orientation Programme

ಕ್ರಿಯೇಟಿವ್‌: ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌. ಎಂ ನಾಗರಾಜ ರಾವ್‌ ಕಲ್ಕಟ್ಟೆ ನುಡಿದರು.
ಅವರು ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮ-7 ರಲ್ಲಿ ಪಾಲ್ಗೊಂಡು “ಸಾಹಿತ್ಯ ಸಹವಾಸ ವ್ಯಕ್ತಿತ್ವ ವಿಕಸನ” ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ ತುಡಿತಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಸಂತೋಷಕ್ಕಾಗಿ ಸಾಹಿತ್ಯ ಓದಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್, ಗಣಪತಿ ಭಟ್‌ ಕೆ. ಎಸ್‌, ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಅಶ್ವತ್‌ ಎಸ್. ಎಲ್‌ ಪ್ರಸ್ತಾವನೆಗೈದರು, ಉಪನ್ಯಾಸಕಿ ಪ್ರಿಯಾಂಕ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.