ಕ್ರಿಯೇಟಿವ್ ಉಡುಪಿಯಲ್ಲಿ ಪಿಯುಸಿ ನಂತರ ಮುಂದೇನು? ಮಾಹಿತಿ ಕಾರ್ಯಾಗಾರ
ತ್ರಿಶಾ ಕ್ಯಾಂಪಸ್ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಉಡುಪಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭವಿಷ್ಯತ್ತಿನಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಗಣಪತಿ ಭಟ್ ರವರು ” ಅವಶ್ಯಕತೆಯೂ ಹಿತಮಿತವಾಗಿದ್ದಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ, ಭವಿಷ್ಯತ್ತಿನಲ್ಲಿ ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಮ್ಮ ಜೀವನವನ್ನು ರೂಪಿಸುವಂತಹ ಕೋರ್ಸ್ ಆಗಿರಬೇಕು” ಎಂದು ತಿಳಿಸಿದರು.
ಇನ್ನೋರ್ವ ಸಂಸ್ಥಾಪಕರು ಆದ ಅಶ್ವತ್ ಎಸ್.ಎಲ್. ರವರು” ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕೆಂಬುವುದಕ್ಕೆ ಸುಂದರ ಪಿಜೈ ರವರು ನಮಗೆಲ್ಲರಿಗೂ ಮಾದರಿ” ಎಂದು ತಿಳಿಸುತ್ತಾ, ವಿವಿಧ ಕೋರ್ಸ್ ಗಳಿಗೆ ಪ್ರಸ್ತುತ ದಿನಮಾನದಲ್ಲಿ ಇರುವ ಬೇಡಿಕೆಗಳು ಹಾಗೂ ಉದ್ಯೋಗವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸೂಕ್ತವಾಗಿರುವ ಕೋರ್ಸುಗಳ ಬಗ್ಗೆ ಮಾಹಿತಿ ನೀಡಿದರು.
ಕ್ರಿಯೇಟಿವ್ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಲಿಶಾನ್ ಗೌಡರವರು ಮಾತನಾಡುತ್ತಾ,”ವಿವಿಧ ಕೋರ್ಸ್ ಗಳಿಗೆ ಪ್ರವೇಶವನ್ನು ಪಡೆಯುವಾಗ ನಾವು ತೆಗೆದುಕೊಳ್ಳಬೇಕಾದ ಮುಂದಾಲೋಚನೆಗಳು ಮತ್ತು ನಿರ್ಧಾರಗಳು ನಮ್ಮ ಜೀವನವನ್ನು ರೂಪಿಸುತ್ತದೆ”ಎಂದು ವಿವಿಧ ಕೋರ್ಸ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ತಮ್ಮ ಅನುಭವದ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆ ಪ್ರಾಂಶುಪಾಲರು ಸ್ಟ್ಯಾನಿ ಲೋಬೋ ರವರು ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.