ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ : ಡಾ. ಅಕ್ಷತಾ ನಾಯಕ್
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ 31 ಆಗಸ್ಟ್ 2024 ರಂದು ಕಾಲೇಜಿನಲ್ಲಿರುವ ಮಹಿಳಾ ಕಲ್ಯಾಣ ಸಂಘದ ವತಿಯಿಂದ ಮಹಿಳಾ ಆರೋಗ್ಯ ಮತ್ತು ಶುಚಿತ್ವ ಎಂಬ ಕಾರ್ಯಕ್ರಮದಡಿ ಎಲ್ಲಾ ವಿದ್ಯಾರ್ಥಿನಿಯರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಅಕ್ಷತಾ ನಾಯಕ್ ರವರು ಮಾತನಾಡಿ ‘ ಆರೋಗ್ಯ ಮತ್ತು ಶುಚಿತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶುಚಿತ್ವ ಇರುವಲ್ಲಿ ಆರೋಗ್ಯ ಇರುತ್ತದೆ. ಮೂಡನಂಬಿಕೆಯಿಂದ ವಿದ್ಯಾರ್ಥಿನಿಯರು ದೂರವಿದ್ದು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು’ ಎನ್ನುತ್ತಾ ಆರೋಗ್ಯ ಮತ್ತು ಶುಚಿತ್ವದ ಮಾಹಿತಿಗಳನ್ನು ಒದಗಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿಯರಾದ ರಶ್ಮಿ ರಾವ್, ಮನಿಷಾ, ಜ್ಯೋತಿ, ಸ್ಮಿತಾ, ಸುದೀಕ್ಷಾ ಶೆಣೈ ರವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ರಾವ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.