ಜಿಲ್ಲಾ ಮಟ್ಟದ ಕ್ರೀಡಾಕೂಟ ಹೆಚ್ ಕೆ ಎಸ್ ಗೆ 22 ಚಿನ್ನ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ.ಯು ಕಾಲೇಜು, ಸೆಪ್ಟೆಂಬರ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿ ಕರಾಟೆ ಸ್ಪರ್ಧೆಯಲ್ಲಿ ಕುಶಾಲ್ ಎಸ್ ಚಿನ್ನ, ರೋಹಿತ್ ಯು ಗೌಡ ಬೆಳ್ಳಿ, ಅಭಿಷೇಕ್ ಬಿ ಡಿ ಬೆಳ್ಳಿ, ಕೌಶಿ ಎಚ್ ಎಲ್ ಬೆಳ್ಳಿ, ಯೋಗ ಸ್ಪರ್ಧೆಯಲ್ಲಿ ಶಮಿತ್ ಪಟೇಲ್ ಎಂ ಎಸ್ ಚಿನ್ನ, ಗಾಯತ್ರಿ ವಿ ಚಿನ್ನ, ಅಶ್ವಿನಿ ಎಂ ಬೆಳ್ಳಿ. ಚೆಸ್ ಸ್ಪರ್ಧೆಯಲ್ಲಿ ಇಂಚರ ಆರ್ ಮತ್ತು ವೃತಾಂಬರ ಆರ್ ಚಿನ್ನದ ಪದಕಗಳನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಅದ್ಭುತ ಸಾಧನೆಗೈದಿದ್ದಾರೆ.
ಬಾಲಕರ ವಿಭಾಗದ ಈಜು ಸ್ಪರ್ಧೆಯಲ್ಲಿ ಲಿಖಿತ್ ಎಂ ಗೌಡ 200 ಮೀಟರ್ ಫ್ರೀ ಸ್ಟೈಲ್ ಚಿನ್ನ, 200 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ, 100 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ. ದಿವಿತ್ ಹೆಚ್ ಜೆ 100 ಮೀಟರ್ ಬಟರ್ಫ್ಲೈ ಚಿನ್ನ, 100 ಮೀಟರ್ ಫ್ರೀ ಸ್ಟೈಲ್ ಚಿನ್ನ, 100 ಮೀಟರ್ ಬ್ಯಾಚ್ ಸ್ಟ್ರೋಕ್ ಬೆಳ್ಳಿ. ಅಕ್ಷಯ್ ಎನ್ ಆರ್ 200 ಮೀಟರ್ ಫ್ರೀ ಸ್ಟೈಲ್ ಕಂಚು, 200 ಮೀಟರ್ ಬ್ಯಾಕ್ ಸ್ಟ್ರೋಕ್ ಕಂಚು, ಬಾಯ್ಸ್ ರಿಲೇ 100 ಮೀಟರ್ ಬೆಳ್ಳಿ.
ಬಾಲಕಿಯರ ವಿಭಾಗದಲ್ಲಿ ಡಿ ಚಿನ್ಮಯಿ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಚಿನ್ನ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಚಿನ್ನ, 100 ಮೀಟರ್ ಫ್ರೀ ಸ್ಟೈಲ್ ಚಿನ್ನ. ಮಾನ್ಯ ಎಂ 100 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ, 50 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ, 50 ಮೀಟರ್ ಫ್ರೀ ಸ್ಟೈಲ್ ಚಿನ್ನ. ಹೇಮಶ್ರೀ ಟಿ ಎನ್ 200 ಮೀಟರ್ ಫ್ರೀ ಸ್ಟೈಲ್ ಚಿನ್ನ, 200 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ, 100 ಮೀಟರ್ ಬ್ಯಾಕ್ ಸ್ಟ್ರೋಕ್ ಬೆಳ್ಳಿ. ಆರಾಧ್ಯ 50 ಮೀಟರ್ ಬಟರ್ಫ್ಲೈ ಚಿನ್ನ, 50 ಮೀಟರ್ ಬ್ಯಾಕ್ ಸ್ಟ್ರೋಕ್ ಚಿನ್ನ, 50 ಮೀಟರ್ ಫ್ರೀ ಸ್ಟೈಲ್ ಬೆಳ್ಳಿ, ಗರ್ಲ್ಸ್ ರಿಲೇ 100 ಮೀಟರ್ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದು ಅದ್ಭುತ ಸಾಧನೆಯನ್ನು ಗೈದಿದ್ದಾರೆ.
ವಿಜೇತರನ್ನು ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.