Follow us:-
ಕೆ. ಸಿ. ಇ. ಟಿ ಯಲ್ಲಿ  ಹೆಚ್. ಕೆ. ಎಸ್. ವಿದ್ಯಾರ್ಥಿಗಳ ಅದ್ಭುತ ಸಾಧನೆ
  • By Creative Media Team
  • January 21, 2025
  • No Comments

ಕೆ. ಸಿ. ಇ. ಟಿ ಯಲ್ಲಿ ಹೆಚ್. ಕೆ. ಎಸ್. ವಿದ್ಯಾರ್ಥಿಗಳ ಅದ್ಭುತ ಸಾಧನೆ

ಏಪ್ರಿಲ್ 18 ಮತ್ತು 19ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪಿ ಯು ಕಾಲೇಜಿನ ವಿದ್ಯಾರ್ಥಿಗಳು  ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್’ನ ಅಡಿಯಲ್ಲಿ   ತರಬೇತಿಯನ್ನು ಪಡೆದು ಅದ್ಭುತ ಸಾಧನೆ ಗೈದಿದ್ದಾರೆ. ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್, ನ್ಯಾಚುರೋಪತಿ, ಫಾರ್ಮಸಿ ಮತ್ತು  ಪಶು ವೈದ್ಯಕೀಯ ಸೇರಿದಂತೆ ಹಲವು ಕೋರ್ಸ್ ಗಳಿಗೆ ಸೇರಲು ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗೆ  ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯ ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನ ಅಡಿಯಲ್ಲಿ ಅತ್ಯುತ್ತಮ  ತರಬೇತಿ ನೀಡಲಾಗುತ್ತಿದೆ.

ತಮ್ಮ ಮೊದಲ ಪ್ರಯತ್ನದಲ್ಲೇ ವಿದ್ಯಾರ್ಥಿಗಳಾದ ಹರ್ಷ ಎಸ್ (ಕೃಷಿ ವಿಭಾಗದಲ್ಲಿ 246ನೇ ರ‍್ಯಾಂಕ್‌, ಪಶು ವೈದ್ಯಕೀಯ 846ನೇ ರ‍್ಯಾಂಕ್‌), ಕುಶಾಲ್.ಪಿ. ಗೌಡ (ಪಶು ವೈದ್ಯಕೀಯ 264ನೇ  ರ‍್ಯಾಂಕ್‌, ಕೃಷಿ 676ನೇ ರ‍್ಯಾಂಕ್‌), ಆನ್ಯ ಡಿ.ಜೆ. ಗೌಡ (ನ್ಯಾಚುರೋಪತಿ 380ನೇ ರ‍್ಯಾಂಕ್‌, ಕೃಷಿ 484 ನೇ ರ‍್ಯಾಂಕ್‌, ಪಶು ವೈದ್ಯಕೀಯ 552ನೇ ರ‍್ಯಾಂಕ್‌,  ನರ್ಸಿಂಗ್ 553ನೇ ರ‍್ಯಾಂಕ್‌,  ಬಿ ಫಾರ್ಮ ಮತ್ತು ಡಿ ಫಾರ್ಮ 829ನೇ ರ‍್ಯಾಂಕ್‌,  ಇಂಜಿನಿಯರಿಂಗ್ 2527 ನೇ ರ‍್ಯಾಂಕ್‌), ಕಾರ್ತಿಕ್ ಕೆ. ಎಸ್. (ಕೃಷಿ 386ನೇ  ರ‍್ಯಾಂಕ್‌, ಪಶು ವೈದ್ಯಕೀಯ 865 ನೇ ರ‍್ಯಾಂಕ್‌), ಕಾವ್ಯ ಸಿ.ಡಿ (ಕೃಷಿ 518ನೇ ರ‍್ಯಾಂಕ್‌, ಪಶು ವೈದ್ಯಕೀಯ 843ನೇ ರ್‍ಯಾಂಕ್), ಗಣ್ಯಶ್ರೀ ಸಿ ಬೈಕೆರೆ (ಪಶು ವೈದ್ಯಕೀಯ 640ನೇ ರ‍್ಯಾಂಕ್‌, ಕೃಷಿ 725 ನೇ ರ‍್ಯಾಂಕ್‌), ವಿಕಾಸ್ ಎಚ್.ಎಸ್ (ಕೃಷಿ 748 ನೇ ರ‍್ಯಾಂಕ್‌), ಪಲ್ಲವಿ. ಜೆ. ಹೊರಕೇರಿ (ಕೃಷಿ 791 ನೇ ರ‍್ಯಾಂಕ್‌), ಗಗನ್ ಕೆ. ಸಿ (ಪಶು ವೈದ್ಯಕೀಯ 979 ನೇ ರ‍್ಯಾಂಕ್‌), ಪ್ರಿಯ ಕೆ.ಎಲ್ (ಇಂಜಿನಿಯರಿಂಗ್ 2688 ನೇ ರ‍್ಯಾಂಕ್‌), ಎಸ್. ಚಕ್ಷು ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 3669 ನೇ ರ‍್ಯಾಂಕ್‌  ಪಡೆದು ಹಲವು ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳೊಂದಿಗೆ ಉತ್ತೀರ್ಣರಾಗಿದ್ದು ಹಾಸನ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ  ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ  ಯೋಗೀಶ್ ವಸಿಷ್ಠ  ಹಾಗೂ ಎಲ್ಲಾ  ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *