ಸಂತ ಜೋಸೆಫ್ ಕಾಮರ್ಸ್ ಫೆಸ್ಟ್ ನಲ್ಲಿ ಹೆಚ್ ಕೆ ಎಸ್ ವಿದ್ಯಾರ್ಥಿಗಳ ಅದ್ಬುತ ಸಾಧನೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜು ಹಾಸನ. ದಿನಾಂಕ:16.11.2024ನೇ ಶನಿವಾರ ಹಾಸನದ ಸಂತ ಜೋಸೆಫ್ ಕಾಲೇಜಿನಲ್ಲಿ ನಡೆದ ಕಾಮರ್ಸ್ ಫೆಸ್ಟ್ ನಲ್ಲಿ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ 55 ವಿದ್ಯಾರ್ಥಿಗಳು ಭಾಗವಹಿಸಿ, ತ್ರಿಶಾ ಹಾಗೂ ತಂಡ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಥಮ, ಸೌಂದರ್ಯ ಹಾಗೂ ತಂಡ ಗೀತ ಗಾಯನದಲ್ಲಿ ಪ್ರಥಮ, ಗೌತಮ್ ಹಾಗೂ ತಂಡ ರೀಲ್ಸ್ ಮೇಕಿಂಗ್ ನಲ್ಲಿ ಪ್ರಥಮ, ಗೌತಮ್ ಸಿ ವೈ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಪ್ರೀತಿ ಹಾಗೂ ತಂಡ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಪ್ರಥಮ, ರೇಷ್ಮಾ ಮತ್ತು ಶರ್ವಾಣಿ ಸಣ್ಣ ಕಥೆಗಳ ಬರಹದಲ್ಲಿ ದ್ವಿತೀಯ, ಬಾಲಕರ ಥ್ರೋ ಬಾಲ್ ತಂಡ ದ್ವಿತೀಯಬಹುಮಾನವನ್ನು ಪಡೆದು ದ್ವಿತೀಯ ರನ್ನರ್ ಅಪ್ ಚಾಂಪಿಯನ್ ಶಿಪ್ ಪಡೆದು ಅದ್ಭುತ ಸಾಧನೆ ಗೈದಿದ್ದಾರೆ.
ವಿಜೇತರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ. ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಸಂಯೋಜಕರಾದ ಅಶ್ವಿನಿ ಸಿ ಎಲ್, ಪ್ರಾಂಶುಪಾಲರು ಹಾಗೂ ಎಲ್ಲಾ
ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.